ರಾಂಚಿ: ಜಾರ್ಖಂಡ್ ನ ಹೊಸ ಅಸೆಂಬ್ಲಿ ಕಟ್ಟಡದಲ್ಲಿ ನಮಾಜ್ ಮಾಡಲು ಪ್ರತ್ಯೇಕ ಕೊಠಡಿಯನ್ನು ಕಾಯ್ದಿರಿಸಲಾಗಿದೆ. ಸದ್ಯ ಇದು ಹೊಸ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಸೆಪ್ಟೆಂಬರ್ 2ರಂದು ಹೊರಡಿಸಿದ ಆದೇಶದಲ್ಲಿ, ಜಾರ್ಖಂಡ್ ನ ಹೊಸ ಅಸೆಂಬ್ಲಿ ಕಟ್ಟಡದಲ್ಲಿ ನಮಾಜ್ ಮಾಡಲು ಕೊಠಡಿ ಸಂಖ್ಯೆ ಟಿಡಬ್ಲ್ಯೂ 348 ಅನ್ನು ಮಂಜೂರು ಮಾಡಲಾಗಿದೆ ಎಂದು ಜಾರ್ಖಂಡ್ ಶಾಸಕಾಂಗ ಸಭೆಯ ಕಾರ್ಯದರ್ಶಿ ತಿಳಿಸಿದ್ದಾರೆ. ಈ ನಿರ್ಧಾರಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಹನುಮಾನ್ ಚಾಲೀಸಾ ಪಠಿಸಲು ರಾಜ್ಯ ವಿಧಾನಸಭೆಯಲ್ಲಿ ಹಿಂದೂಗಳಿಗೆ ಪ್ರತ್ಯೇಕ ಕೊಠಡಿಯನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದೆ.
“ಮುಸ್ಲಿಮರಿಗೆ ನಮಾಜ್ ಮಾಡಲು ಪ್ರತ್ಯೇಕ ಕೋಣೆ ಮೀಸಲಿರಿಸಿದರೆ, ಹಿಂದೂಗಳಿಗೆ ಹನುಮಾನ್ ಚಾಲೀಸಾ (ಪ್ರತ್ಯೇಕ ಕೋಣೆಯಲ್ಲಿ) ಪಠಿಸಲು ಏಕೆ ಅನುಮತಿಸುವುದಿಲ್ಲ. ಹನುಮಾನ್ ಚಾಲೀಸಾ ಪಠಿಸಲು ಹಿಂದೂಗಳಿಗೆ 5 ಕೊಠಡಿಗಳು ಅಥವಾ ಸಭಾಂಗಣವನ್ನು ಮಂಜೂರು ಮಾಡುವಂತೆ ಜಾರ್ಖಂಡ್ ವಿಧಾನಸಭೆ ಕಾರ್ಯದರ್ಶಿಯನ್ನು ಒತ್ತಾಯಿಸುತ್ತಿದ್ದೇನೆ” ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
ಏರ್ಟೆಲ್ ಶುರು ಮಾಡಿದೆ ಬಂಪರ್ ಸೇವೆ…..! ಗ್ರಾಹಕರಿಗೆ ಸಿಗ್ತಿದೆ 30 ದಿನ ಉಚಿತ ಸೌಲಭ್ಯ
ಮಾಜಿ ಸ್ಪೀಕರ್ ಮತ್ತು ಬಿಜೆಪಿ ನಾಯಕ ಸಿ.ಪಿ. ಸಿಂಗ್ ಕೂಡ ಇದೇ ರೀತಿಯ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಮತ್ತು ವಿಧಾನಸಭೆ ಆವರಣದಲ್ಲಿ ದೇವಸ್ಥಾನ ನಿರ್ಮಿಸಬೇಕೆಂದು ಈ ವೇಳೆ ಅವರು ಒತ್ತಾಯಿಸಿದ್ದಾರೆ. “ಸ್ಪೀಕರ್ ಒಪ್ಪಿದರೆ ನಮ್ಮ ಸ್ವಂತ ವೆಚ್ಚದಲ್ಲಿ ದೇವಸ್ಥಾನ ನಿರ್ಮಿಸಬಹುದು” ಎಂದು ಅವರು ತಿಳಿಸಿದ್ದಾರೆ.
ಇನ್ನು ಈ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ನಾಯಕ ಬಾಬು ಲಾಲ್ ಮರಾಂಡಿ, ಪ್ರಜಾಪ್ರಭುತ್ವದ ದೇವಸ್ಥಾನವು ಪ್ರಜಾಪ್ರಭುತ್ವದ ದೇವಾಲಯವಾಗಿ ಮಾತ್ರ ಉಳಿಯಬೇಕು ಎಂದು ಹೇಳಿದರು. ಅಲ್ಲದೆ ನಮಾಜ್ ಗಾಗಿ ಪ್ರತ್ಯೇಕ ಕೊಠಡಿ ಹಂಚಿಕೆ ಮಾಡಿರುವುದು ಸರಿಯಲ್ಲ ಎಂದು ಅವರು ವಿರೋಧಿಸಿದ್ದಾರೆ. 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಜಾರ್ಖಂಡ್ ವಿಧಾನಸಭೆಯ ಹೊಸ ಕಟ್ಟಡವನ್ನು ಉದ್ಘಾಟಿಸಿದ್ದರು.