ಅಫ್ಘಾನಿಸ್ತಾನದಲ್ಲಿ ಪಾರುಪತ್ಯ ಸಾಧಿಸಿರುವ ತಾಲಿಬಾನಿಗಳು ದಿನಕ್ಕೊಂದು ಹೈಡ್ರಾಮಾ ಮಾಡುತ್ತಲೇ ಇದ್ದಾರೆ. ಇದೀಗ ತಾಲಿಬಾನ್ ರಾಜಕೀಯ ಕಚೇರಿ ಮುಖ್ಯಸ್ಥ ಮುಲ್ಲಾಬರದಾರ್ ಹೊಸ ಸರ್ಕಾರವನ್ನು ಮುನ್ನಡೆಸಲಿದ್ದಾರೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಇಸ್ಲಾಮಿಕ್ ಗುಂಪಿನ ಕನಿಷ್ಟ ಮೂರು ಮೂಲಗಳು ಈ ಮಾಹಿತಿಯನ್ನು ದೃಢೀಕರಿಸಿವೆ.
ಈ ಹಿಂದೆ ಸರ್ಕಾರ ರಚನೆ ಮಾತುಕತೆಯಲ್ಲಿ ನಿರತರನಾಗಿದ್ದ ತಾಲಿಬಾನ್ ನಾಯಕ ಮುಲ್ಲಾ ಬರದಾರ್ ಈ ಬಗ್ಗೆ ತಮ್ಮ ಸಂಘಟನೆಯ ಸದಸ್ಯರು ಹಾಗೂ ಇತರೆ ರಾಜಕೀಯ ನಾಯಕರೊಂದಿಗೆ ಕಾಬೂಲ್ನಲ್ಲಿ ಚರ್ಚೆ ನಡೆಸಿದ್ದರು.