ಬೆಂಗಳೂರು: ಕೋವಿಡ್ ಲಸಿಕೆಗೆ ವಿರೋಧ ವ್ಯಕ್ತಪಡಿಸಿ, ವ್ಯಾಕ್ಸಿನ್ ವಿರುದ್ಧ ವೈದ್ಯರೇ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಪ್ರಸಂಗ ಬೆಳಕಿಗೆ ಬಂದಿದೆ.
ಶಾಲಾ-ಕಾಲೇಜು ಮಕ್ಕಳು ಭೌತಿಕ ತರಗತಿಗಳಿಗೆ ಹಾಜರಾಗಲು ಲಸಿಕೆ ಕಡ್ಡಾಯವಾಗಿದೆ. ಆದರೆ ಆಯುರ್ವೇದ ಕಾಲೇಜಿನಲ್ಲಿ ಲಸಿಕೆ ಕಡ್ಡಾಯ ಮಾಡಿರುವುದನ್ನು ಪ್ರಶ್ನಿಸಿ ಡಾ.ಶ್ರೀನಿವಾಸ ಕಕ್ಕಿಲಾಯ ಹಾಗೂ ಮತ್ತಿತರರು ಪಿಐಎಲ್ ಸಲ್ಲಿಸಿದ್ದರು.
ಒತ್ತಡದಿಂದ ಪುರುಷರಿಗಿಂತ ಮಹಿಳೆಯರಲ್ಲೇ ಹೃದಯಾಘಾತ ಅಪಾಯ ಹೆಚ್ಚು: ಅಧ್ಯಯನದಲ್ಲಿ ಶಾಕಿಂಗ್ ಮಾಹಿತಿ ಬಹಿರಂಗ
ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ, ಸ್ವತಃ ವೈದ್ಯರಾದವರೇ ಲಸಿಕೆ ಪ್ರಶ್ನಿಸಿ ಪಿಐಎಲ್ ಸಲ್ಲಿಸಿರುವುದು ಆಘಾತಕಾರಿ. ಲಸಿಕೆ ಇರುವುದು ಮನುಕುಲದ ಉಳಿತಾಗಿ. ಪೊಲೀಯೋ ಲಸಿಕೆಗೂ ಹೀಗೆಯೇ ವಿರೋಧ ವ್ಯಕ್ತವಾಗಿತ್ತು. ಆದರೆ ವಿರೋಧ ಮಾಡಿದ ದೇಶಗಳಲ್ಲೇ ಪೊಲೀಯೋ ಇನ್ನು ಉಳಿದಿದೆ. ಶಾಲಾ-ಕಾಲೇಜು ಮಕ್ಕಳು ಲಸಿಕೆ ಹಾಕಿಸಿಕೊಂಡು ತರಗತಿಗಳಿಗೆ ಹಾಜರಾಗುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಅಲ್ಲದೇ ಅರ್ಜಿ ವಿಚಾರಣೆಯನ್ನು ಕೋವಿಡ್ ಪ್ರಕರಣದ ಪ್ರತ್ಯೇಕ ಪೀಠಕ್ಕೆ ವರ್ಗಾಯಿಸಿದರು.