ಭೋಪಾಲ್: ಆರು ಜನರ ಗುಂಪೊಂದು ಸ್ಮಶಾನದಲ್ಲಿ 22 ವರ್ಷದ ವ್ಯಕ್ತಿಯನ್ನು ಥಳಿಸಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಹರ್ದಾದಲ್ಲಿ ನಡೆದಿದೆ.
ಕುಲದೀಪ್ ಯೋಗಿ, ಹಲ್ಲೆಗೊಳಗಾದ ಯುವಕ. ಸೋಮವಾರ ಮಧ್ಯಾಹ್ನ ವೇಳೆ ಉಡಾ ಗ್ರಾಮದ ಸ್ಮಶಾನದಲ್ಲಿ ಈ ಘಟನೆ ಸಂಭವಿಸಿದೆ. ಅದೇ ಗ್ರಾಮದ ನಿವಾಸಿಯಾಗಿರುವ ಯೋಗಿ, ಹಲ್ಲೆ ಮಾಡಿದವರ ವಿರುದ್ಧ ದೂರು ನೀಡಿದ್ದಾನೆ. ಸದ್ಯ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.
6720 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ದೂರಿನ ಆಧಾರದ ಮೇಲೆ ಆರೋಪಿಗಳಾದ ಆಸಿಫ್, ಸೈಫ್, ಫಿರೋಜ್, ಆರಿಫ್, ಷೂಬ್ ಮತ್ತು ಇಖ್ಲಾಕ್ ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಸೆಕ್ಷನ್ 294 (ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯ), 323 (ಸ್ವಯಂಪ್ರೇರಣೆಯಿಂದ ಹಲ್ಲೆ) ಹಾಗೂ ಐಪಿಸಿ ಸೆಕ್ಷನ್ 506ರ (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಅಲ್ಲದೆ ಯೋಗಿಗೆ ಹಲ್ಲೆ ನಡೆಸಿದ ಆರೋಪಿಗಳು ಘಟನೆಯ ವಿಡಿಯೋ ಚಿತ್ರೀಕರಿಸಿ ವಾಟ್ಸಾಪ್ ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಕಾಣುವ ಪ್ರಕಾರ, ಪುರುಷರ ಗುಂಪೊಂದು ವ್ಯಕ್ತಿಗೆ ಥಳಿಸಿದೆ. ಆದರೆ, ಹರಿಯಾಣ್ವಿ ಹಾಡನ್ನು ಹಿನ್ನೆಲೆಯಲ್ಲಿ ಪ್ಲೇ ಮಾಡಲಾಗಿದೆ ಎಂದು ಹೇಳಲಾಗಿದೆ.