ಲಕ್ನೋ: ಇಂದಿನ ಯುವಜನರು ಹೆಚ್ಚಾಗಿ ವೆಬ್ ಸಿರೀಸ್ ನೋಡುತ್ತಾರೆ. ಉತ್ತಮ ಸಂದೇಶ ನೀಡುವಂತ ಕಥೆಗಳಾದರೆ ಪರವಾಗಿಲ್ಲ. ಆದರೆ ಅಪರಾಧ ಪ್ರಕರಣದಂತಹ ಕಥೆಗಳಿದ್ದು, ಆ ರೀತಿ ಮಾಡಿದರೆ ಏನಾಗಬಹುದು..?
ಹೌದು, ಕ್ರೈಮ್ ವೆಬ್ ಸಿರೀಸ್ ನೋಡಿ ಅದರಿಂದ ಸ್ಪೂರ್ತಿ ಪಡೆದ ಮೂವರು ಯುವಕರು ಜ್ಯುವೆಲ್ಲರಿ ಅಂಗಡಿಯಲ್ಲಿ ದರೋಡೆ ಮಾಡಿರುವ ಆಘಾತಕಾರಿ ಘಟನೆ ಲಕ್ನೋದ ಗೋಮತಿ ನಗರದಲ್ಲಿ ನಡೆದಿದೆ. ಒಟಿಟಿ ಯಲ್ಲಿ ಪ್ರಸಾರವಾಗುವ ಅಪರಾಧ ವೆಬ್ ಸರಣಿ ಮನಿಹೀಸ್ಟ್ ನಿಂದ ಪ್ರೇರಣೆ ಪಡೆದ ಮೂವರು ಯುವಕರು ದರೋಡೆಗಿಳಿದಿದ್ದಾರೆ.
16 ತಿಂಗಳ ಅವಧಿಯಲ್ಲಿ 10 ಮಿಲಿಯನ್ ಬಳಕೆದಾರರನ್ನು ಸಂಪಾದಿಸಿದ ‘ಕೂ’ ಆಪ್…..!
24 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದ ಪೊಲೀಸರು ಕಿಂಗ್ ಪಿನ್ ನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಕೌಂಟರ್ ನಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ ಪ್ರದೀಪ್ ಹಾಗೂ ಆತನ ಇಬ್ಬರು ಗೆಳೆಯರ ಕೈಗೆ ಪೊಲೀಸರು ಕೋಳ ಹಾಕಿ ಜೈಲಿಗಟ್ಟಿದ್ದಾರೆ.
ಆರೋಪಿ ಇಮ್ರಾನ್ ನಿಂದ 15 ಲಕ್ಷ ರೂ. ಮೌಲ್ಯದ ಆಭರಣಗಳು, ಕಾರು ಹಾಗೂ ಬುರ್ಖಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅರ್ಧದಲ್ಲೇ ಶಾಲೆ ಬಿಟ್ಟ ಮೂವರು ಯುವಕರು ಐಷಾರಾಮಿ ಜೀವನಕ್ಕಾಗಿ ಕಳ್ಳತನಕ್ಕೆ ಇಳಿದಿದ್ದಾರೆ ಎಂದು ಪೊಲೀಸರು ತಿಳಿಸಿದರು.