alex Certify ಅನೈತಿಕ ಸಂಬಂಧ ಶಂಕೆ: ಸಂಬಂಧಿಕರ ಜೊತೆ ಸೇರಿ ಪತಿ ಹತ್ಯೆಗೈದ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನೈತಿಕ ಸಂಬಂಧ ಶಂಕೆ: ಸಂಬಂಧಿಕರ ಜೊತೆ ಸೇರಿ ಪತಿ ಹತ್ಯೆಗೈದ ಪತ್ನಿ

ಜೈಪುರ: ಅನೈತಿಕ ಸಂಬಂಧ ಹೊಂದಿರುವ ಶಂಕೆ ಹಿನ್ನೆಲೆಯಲ್ಲಿ ಇಬ್ಬರು ಸಂಬಂಧಿಕರೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಕೊಲೆಗೈದಿರುವ ಘಟನೆ ರಾಜಸ್ತಾನದ ಭಿಲ್ವಾರಾದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ದೇವಿ ಸಿಂಗ್ ಎಂದು ಗುರುತಿಸಲಾಗಿದೆ. ಈತ ಮೇವಿನ ವ್ಯಾಪಾರ ನಡೆಸುತ್ತಿದ್ದ ಎನ್ನಲಾಗಿದೆ. ಪೊಲೀಸರ ಪ್ರಕಾರ, ದೇವಿ ಸಿಂಗ್ ಮನೆಗೆ ಬೈಕ್ ನಲ್ಲಿ ಬಂದ ಮೂವರು ಆತನ ಕುತ್ತಿಗೆ ಕತ್ತರಿಸಿದ್ದಾರೆ.

ದಾಳಿ ಎಸಗಿ ಪಲಾಯನ ಮಾಡುವ ಮೊದಲು ಒಬ್ಬಾತ ದೇವಿ ಸಿಂಗ್ ಮೇಲೆ ಗುಂಡು ಹಾರಿಸಿದ್ದಾನೆ. ಅಲ್ಲದೆ ತಮ್ಮ ಗುರುತು ಮರೆಮಾಚಲು ಆರೋಪಿಗಳು ಮಾಸ್ಕ್ ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

BIG NEWS: ರಾಮನಗರದವರೆಗೂ ಮೆಟ್ರೋ ವಿಸ್ತರಣೆ; ಸಿಎಂ ಬೊಮ್ಮಾಯಿ ಮಹತ್ವದ ಘೋಷಣೆ

ಇನ್ನು ಕೊಲೆ ನಡೆದ ನಂತರ ಸ್ಥಳಕ್ಕಾಗಮಿಸಿ ತನಿಖೆ ಶುರು ಮಾಡಿದ ಪೊಲೀಸರಿಗೆ ಪತಿ – ಪತ್ನಿ ಸಂಬಂಧ ಸರಿ ಇರಲಿಲ್ಲ ಎಂದು ತಿಳಿದು ಬಂದಿದೆ. ವಿಚಾರಣೆ ವೇಳೆ ದೇವಿ ಸಿಂಗ್ ಕೊಲೆಯಲ್ಲಿ ತನ್ನ ಪಾತ್ರವಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಶಂಕೆಯಿಂದ ಸಂಬಂಧಿಕರ ಜೊತೆ ಸೇರಿ ಹತ್ಯೆಗೆ ಸಂಚು ರೂಪಿಸಲಾಯಿತು. ಇದಕ್ಕೆ ಸಹೋದರಿಯ ಪತಿ ಕುಲದೀಪ್ ಸಿಂಗ್ ಸಹಾಯ ಮಾಡಿರುವುದಾಗಿ ತಿಳಿಸಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...