140 ಶ್ವಾನ, 60 ಬೆಕ್ಕುಗಳನ್ನು ಆಫ್ಘಾನ್ ನಿಂದ ಹೊರತರಲು ‘ಆಪರೇಷನ್ ಆರ್ಕ್’ 27-08-2021 9:55AM IST / No Comments / Posted In: Latest News, Live News, International ತಾಲಿಬಾನಿಗಳ ಕ್ರೌರ್ಯಕ್ಕೆ ಬೆದರಿ ಅಫಘಾನಿಸ್ತಾನದಲ್ಲಿ ಮನುಷ್ಯರು ಜೀವಿಸಲು ಹೆದರಿಕೊಂಡು ರಾಷ್ಟ್ರವನ್ನೇ ತೊರೆಯುತ್ತಿದ್ದಾರೆ. ಆದರೆ, ಅಮೆರಿಕದ ಪ್ರಜೆಗೆ ಮಾತ್ರ ತನ್ನ ಎನ್ಜಿಒದಲ್ಲಿರುವ 140 ನಾಯಿಗಳು, 60 ಬೆಕ್ಕುಗಳ ಚಿಂತೆ ಕಾಡುತ್ತಿದೆ. ಸರಕು ಸಾಗಣೆ ವಿಮಾನವನ್ನು ಬಾಡಿಗೆಗೆ ಪಡೆದು, ಈ ಪ್ರಾಣಿಗಳನ್ನು ಆಫ್ಘನ್ನಿಂದ ಅನ್ಯ ದೇಶಕ್ಕೆ ಸುರಕ್ಷಿತವಾಗಿ ಕರೆದೊಯ್ಯಲು ‘ಆಪರೇಷನ್ ಆರ್ಕ್’ ಹೆಣೆದಿದ್ದಾರೆ. ಡೈನೋಸಾರ್ ನೋಡಿದ್ರಾ ಫ್ಲಾರಿಡಾ ಮಹಿಳೆ…? ಕುತೂಹಲ ಹುಟ್ಟಿಸಿದೆ ಈ ವಿಡಿಯೋ ಈತನ ಹೆಸರು ಪೌಲ್ ಪೆನ್. ನೌಕಾಪಡೆಯ ಮಾಜಿ ಅಧಿಕಾರಿ. 2009ರಲ್ಲಿ ‘ನೌಜಾದ್’ ಹೆಸರಿನ ಸ್ವಂತ ಎನ್ಜಿಒ ಸ್ಥಾಪಿಸಿಕೊಂಡಿದ್ದಾರೆ. ನಾಯಿಗಳು ಅಪವಿತ್ರ ಎಂದು ಭಾವಿಸುವ ತಾಲಿಬಾನಿಗಳು, ಇದಕ್ಕೂ ಮುನ್ನ ನಾಯಿ ಸಾಕುವಿಕೆಯನ್ನು ಆಫ್ಘನ್ನಲ್ಲಿ ನಿಷೇಧಿಸಿದ್ದರು. ಕೊನೆಗೂ ಪೌಲ್ ಯತ್ನಕ್ಕೆ ಬ್ರಿಟನ್ ಸರ್ಕಾರ ನೆರವಾಗಿದ್ದು, ಪೌಲ್ನ ಎನ್ಜಿಒ ಸಿಬ್ಬಂದಿ ಮತ್ತು ಪ್ರಾಣಿಗಳಿಗೂ ಸೇರಿದಂತೆ 68 ವೀಸಾ ನೀಡಿದೆ. Now that Pen Farthing’s staff have been cleared to come forward under LOTR I have authorised MOD to facilitate their processing alongside all other eligible personnel at HKIA. At that stage, if he arrives with his animals we will seek a slot for his plane. @DefenceHQ — Rt. Hon Ben Wallace MP (@BWallaceMP) August 25, 2021