ತಾಲಿಬಾನ್ ತೆಕ್ಕೆಗೆ ಕಾಬೂಲ್ ಬೀಳುತ್ತಲೇ ಅಲ್ಲಿಂದ ಪಲಾಯನಗೈದ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದು, ರಕ್ತಪಾತ ತಪ್ಪಿಸಲು ತಮಗೆ ಅದೊಂದೇ ದಾರಿ ಉಳಿದಿತ್ತು ಎಂದಿದ್ದಾರೆ.
ಸರ್ಕಾರದ ಬೊಕ್ಕಸದಿಂದ $169 ದಶಲಕ್ಷ ಡಾಲರ್ಗಳನ್ನು ತಮ್ಮೊಂದಿಗೆ ಹೊತ್ತೊಯ್ದಿದ್ದಾರೆ ಎಂದು ತಜಕಿಸ್ತಾನದ ರಾಯಭಾರಿ ಮಾಡಿದ ಆಪಾದನೆಯನ್ನು ಅಲ್ಲಗಳೆದ ಘನಿ, ಫೇಸ್ಬುಕ್ ಪೇಜ್ನಲ್ಲಿ ತಮ್ಮ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ತಾವೀಗ ಯುಎಇನಲ್ಲಿ ಇರುವುದಾಗಿ ತಿಳಿಸಿದ್ದಾರೆ.
ಕೊರೊನಾ ಸಂಕಷ್ಟದ ನಡುವೆ ಚಿತ್ರರಂಗದಲ್ಲಿ ಹೊಸ ಭರವಸೆ ಹುಟ್ಟು ಹಾಕಿದ ‘ಬೆಲ್ಬಾಟಂ’….!
ತಮ್ಮೊಂದಿಗೆ ಒಂದೇ ಒಂದು ಜೊತೆಗೆ ಸಾಂಪ್ರದಾಯಿಕ ಧಿರಿಸು ಹಾಗೂ ಚಪ್ಪಲಿಯನ್ನು ಮಾತ್ರವೇ ದೇಶ ಬಿಟ್ಟು ಬರುವಾಗ ಧರಿಸಿ ಬಂದಿದ್ದಾಗಿ ಹೇಳಿರುವ ಘನಿ, ತಮ್ಮ ಮೇಲೆ ಮಾಡಲಾದ ಎಲ್ಲಾ ಆಪಾದನೆಗಳೂ ಆಧಾರ ರಹಿತ ಎಂದಿದ್ದಾರೆ.
ಭಾನುವಾರದಂದು ತಾಲಿಬಾನಿ ಪಡೆಗಳು ಕಾಬೂಲ್ ನಗರವನ್ನು ತೆಕ್ಕೆಗೆ ತೆಗೆದುಕೊಳ್ಳುತ್ತಲೇ ಘನಿ ಅಲ್ಲಿಂದ ಹೊರ ಬಂದಿದ್ದಾರೆ.
https://www.youtube.com/watch?v=MNQCqbCZp74