ಒಂದೆಡೆ ತಾಲಿಬಾನ್ ಪಡೆಗಳು ರಾಜಧಾನಿ ಕಾಬೂಲ್ ಪ್ರವೇಶಿಸುತ್ತಲೇ ದೇಶ ಬಿಟ್ಟು ಹೋದ ಅಧ್ಯಕ್ಷ ಅಶ್ರಫ್ ಘನಿ ಒಮಾನ್ ಮೂಲಕ ಅಮೆರಿಕ ದಾರಿ ಹಿಡಿದರೆ, ಯುದ್ಧಪೀಡಿತ ದೇಶದ ಮಾಜಿ ಉಪಾಧ್ಯಕ್ಷರೊಬ್ಬರು ಯಾವುದೇ ಪರಿಸ್ಥಿತಿಯಲ್ಲೂ ಭಯೋತ್ಪಾದಕ ಸಂಘಟನೆಗೆ ಬಗ್ಗಲ್ಲ ಎಂದಿದ್ದಾರೆ.
ತೀವ್ರ ಜ್ವರದ ಕಾರಣಕ್ಕೆ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿ ಆಸ್ಪತ್ರೆಗೆ ಹೋದ ʼಚಿನ್ನʼದ ಹುಡುಗ
“ಯಾವುದೇ ಪರಿಸ್ಥಿತಿಯಲ್ಲೂ ನಾನು ಎಂದಿಗೂ ತಾಲಿಬಾನ್ ಭಯೋತ್ಪಾದಕರಿಗೆ ತಲೆಬಾಗುವುದಿಲ್ಲ. ನನ್ನ ಹೀರೋ ಅಹಮದ್ ಶಾ ಮಸೌದ್‌ರ ಸದಾಶಯಗಳಿಗೆ ನಾನು ಎಂದಿಗೂ ದ್ರೋಹ ಬಗೆಯುವುದಿಲ್ಲ. ನನ್ನನ್ನು ನಂಬಿದ ಲಕ್ಷಾಂತರ ಮಂದಿಯನ್ನು ನಿರಾಸೆಗೊಳಿಸಲಾರೆ. ತಾಲಿಬಾನ್ ಜೊತೆಗೆ ನಾನು ಎಂದಿಗೂ ಒಂದೇ ಸೂರನ್ನು ಹಂಚಿಕೊಳ್ಳಲಾರೆ. ಎಂದಿಗೂ,” ಎಂದು ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೆಹ್ ಟ್ವೀಟ್ ಮಾಡಿದ್ದಾರೆ.
ಪಲಾಯನಗೈದ ಅಧ್ಯಕ್ಷರ ಬದಲಿಗೆ ತಾತ್ಕಾಲಿಕವಾಗಿ ಒಳಾಡಳಿತ ವ್ಯವಹಾರಗಳ ಮಾಜಿ ಸಚಿವ ಅಲಿ ಅಹಮದ್ ಜಲಾಲಿ ಸರ್ಕಾರದ ಮುಖ್ಯಸ್ಥರಾಗಿ ನೇಮಕವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ತಾಲಿಬಾನ್ ಹಾಗೂ ಅಫ್ಘಾನಿಸ್ತಾನದ ಜನ-ಚುನಾಯಿತ ಸರ್ಕಾರಗಳ ನಡುವೆ ಮಾತುಕತೆಗಳು ನಡೆಯುತ್ತಿದ್ದು, ಬರೀ ತಾಲಿಬಾನೀ ಸದಸ್ಯರ ಹೊರತಾಗಿ ಆಡಳಿತದಲ್ಲಿ ಬೇರೆಯವರಿಗೂ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸುತ್ತಿವೆ.