ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಈಗ ತಾಲಿಬಾನಿ ಹೋರಾಟಗಾರರ ತೆಕ್ಕೆಗೆ ಬಹುತೇಕ ಬಿದ್ದಿದ್ದು, ದೇಶದೆಲ್ಲೆಡೆ ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಇದೇ ವೇಳೆ, ಅಧ್ಯಕ್ಷ ಅಶ್ರಫ್ ಘನಿ ಹಾಗೂ ಈ ಸಂಕಟದ ಪರಿಸ್ಥಿತಿಯಲ್ಲಿ ತಮ್ಮ ದೇಶವಾಸಿಗಳನ್ನು ನಡನೀರಿನಲ್ಲಿ ಕೈಬಿಟ್ಟು ದೇಶ ಬಿಟ್ಟು ಪಲಾಯನಗೈದಿದ್ದು, ಒಮಾನ್ನ ಸೇರಿದ್ದಾರೆ. ತಜಕಿಸ್ತಾನದ ದುಶಾಂಬೇಯಲ್ಲಿ ಲ್ಯಾಂಡ್ ಆಗಲು ಬಿಡದೇ ಇದ್ದ ಬಳಿಕ ಘನಿ ಒಮಾನ್ಗೆ ಹೋಗಿದ್ದು, ಅಲ್ಲಿಂದ ಅಮೆರಿಕಗೆ ತೆರಳುವ ಸಾಧ್ಯತೆ ಇದೆ.
ಮೊಬೈಲ್ ಟವರ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಘನಿ, “ತಾಲಿಬಾನ್ ತನ್ನ ಬಂದೂಕು ಹಾಗೂ ಖಡ್ಗಗಳಿಂದ ತೀರ್ಪನ್ನು ಗೆದ್ದಿವೆ. ಇದೀಗ ತಮ್ಮ ದೇಶವಾಸಿಗಳ ಗೌರವ, ಆಸ್ತಿ ಹಾಗೂ ಸ್ವಾಭಿಮಾನಗಳ ರಕ್ಷಣೆ ಅವರ ಹೊಣೆಗಾರಿಕೆಯಾಗಿದೆ,” ಎಂದು ತಿಳಿಸಿದ್ದಾರೆ.
ನಗದು ತುಂಬಿದ್ದ ಕಾರುಗಳಲ್ಲಿ ಎಸ್ಕಾರ್ಟ್ ಆದ ಘನಿ, ಕಾಬೂಲ್ನಿಂದ ಪಲಾಯನಗೈದಿದ್ದಾರೆ ಎಂದು ರಷ್ಯಾದ ರಾಯಭಾರ ಕಚೇರಿಯ ವಕ್ತಾರರೊಬ್ಬರು ಸ್ಪುಟ್ನಿಕ್ ವಾಹಿನಿಗೆ ತಿಳಿಸಿದ್ದಾರೆ.
“ಘನಿ ಅಫ್ಘಾನಿಸ್ತಾನದಿಂದ ಪಲಾಯನಗೈದಿದ್ದು, ಅವರ ಸರ್ಕಾರ ಪತನವಾಗಿದ್ದರ ಸೂಚ್ಯದಂತಿದೆ. ನಾಲ್ಕು ಕಾರುಗಳಲ್ಲಿ ತುಂಬಿದ್ದ ಹಣವನ್ನು ಹೆಲಿಕಾಪ್ಟರ್ಗೆ ತುಂಬಿಸಲು ನೋಡಿದ್ದಾರೆ, ಆದರೆ ಎಲ್ಲವೂ ಅದರಲ್ಲಿ ಹಿಡಿಸಿಲ್ಲ. ಒಂದಷ್ಟು ಹಣವನ್ನು ರನ್ವೇಯಲ್ಲೇ ಬಿಡಲಾಗಿದೆ,” ಎಂದು ರಷ್ಯನ್ ರಾಯಭಾರ ವಕ್ತಾರ ನಿಕಿಟಾ ಇಶೆಂಕೋ ತಿಳಿಸಿದ್ದಾರೆ.