ಬೇಕಾಗುವ ಸಾಮಾಗ್ರಿಗಳು: ದೋಸೆ ಅಕ್ಕಿ- 4 ಕಪ್, ಅವಲಕ್ಕಿ- 1 ಕಪ್, ಕಾಯಿತುರಿ- 1 ಕಪ್, ಬೆಲ್ಲ- ಅರ್ಧ ಕಪ್, ಮೊಸರು- ಅರ್ಧ ಕಪ್, ಮೆಂತ್ಯ ಕಾಳು- ಒಂದು ಮುಕ್ಕಾಲು ಟೀ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು.
ಚಹಾ ಜೊತೆ ಈರುಳ್ಳಿ ವಡೆ ಸವಿಯಿರಿ
ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು 5 ರಿಂದ 6 ಗಂಟೆ ಕಾಲ ನೆನೆಸಿಡಿ. ಅವಲಕ್ಕಿಯನ್ನೂ ಕೂಡ ನೆನೆಸಿಡಬೇಕು. ನಂತರ ಇದನ್ನು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ಜೊತೆಗೆ ಮೊಸರು, ಬೆಲ್ಲ, ಅವಲಕ್ಕಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ರುಬ್ಬಿಕೊಳ್ಳಿ.
ನಂತರ ಈ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಹುಳಿ ಬರಲು ಇಡಬೇಕು. 8 ರಿಂದ 10 ಗಂಟೆ ಕಾಲ ಮುಚ್ಚಿಟ್ಟು ಹಾಗೆ ಇಡಿ. ಮಾಮೂಲಿ ದೋಸೆ ಹಿಟ್ಟಿನ ಹದವಿರಲಿ. ನಂತರ ಸ್ಟೌ ನಲ್ಲಿ ದೋಸೆ ಕಾವಲಿ ಇಟ್ಟು, ಹದ ಬಿಸಿಯಾದಾಗ ದಪ್ಪವಾಗಿ ದೋಸೆ ಹುಯ್ಯಿರಿ. ಎರಡೂ ಕಡೆ ಚೆನ್ನಾಗಿ ಬೇಯಿಸಿದರೆ ಸವಿಯಲು ರುಚಿಯಾದ ಮೆಂತ್ಯ ದೋಸೆ ರೆಡಿ.