ನ್ಯೂಯಾರ್ಕ್: ಇನ್ನೇನು ರೈಲು ಪ್ಲಾಟ್ ಫಾರಂ ಗೆ ಎಂಟ್ರಿ ಕೊಡಬೇಕು ಅಂದಾಗ ಯಾರಾದರೂ ಹಳಿಗೆ ಬಿದ್ದು ಬಿಟ್ಟರೆ ಜೀವ ಬಾಯಿಗೆ ಬಂದಂತಾಗುತ್ತದೆ. ಆದರೆ ಇಂಥ ಘಟನೆ ನಡೆದಾಗ ವ್ಯಕ್ತಿಯ ಜೀವ ಉಳಿಸಿ ಪ್ರಾಣ ಕಾಪಾಡಿ ಪ್ರಶಂಸೆಗೆ ಪಾತ್ರನಾಗಿದ್ದಾನೆ.
ಹೌದು, ಅಮೆರಿಕಾದ ನ್ಯೂಯಾರ್ಕ್ ನಗರದ ಯೂನಿಯನ್ ಸ್ಕೇರ್ ನಲ್ಲಿ ಈ ಘಟನೆ ನಡೆದಿದೆ. ಗಾಲಿಕುರ್ಚಿಯಲ್ಲಿದ್ದ ವ್ಯಕ್ತಿಯೊಬ್ಬ ಆಕಸ್ಮಾತ್ ಆಗಿ ರೈಲ್ವೇ ಹಳಿಗೆ ಬಿದ್ದಿದ್ದಾನೆ. ಇನ್ನೇನು ರೈಲು ಬರಲು ಕೆಲವೇ ಸೆಕೆಂಡುಗಳು ಬಾಕಿಯಿತ್ತಷ್ಟೇ. ಈ ವೇಳೆ ಬಂದ ವ್ಯಕ್ತಿಯೊಬ್ಬ ಹಳಿಗೆ ಹಾರಿ ವ್ಯಕ್ತಿಯನ್ನು ರಕ್ಷಿಸಿದ್ದಾನೆ.
ಸಹಪ್ರಯಾಣಿಕರು ಕೂಡ ಇಬ್ಬರನ್ನೂ ಮೇಲೆತ್ತಲು ಸಹಾಯ ಮಾಡಿದ್ದಾರೆ. ಹಳಿಯಿಂದ ಮೇಲೆ ಬಂದ 10 ಸೆಕೆಂಡುಗಳ ಅಂತರದಲ್ಲಿ ರೈಲು ಪ್ಲಾಟ್ ಫಾರಂಗೆ ಬಂದಿದೆ. ಸದ್ಯ ಗಾಲಿಕುರ್ಚಿಯಲ್ಲಿದ್ದ ವ್ಯಕ್ತಿ ಅಪಾಯದಿಂದ ಪಾರಾಗಿದ್ದಾನೆ.
Breaking News: ಕುಸ್ತಿಯಲ್ಲಿ ಭಾರತಕ್ಕೆ ಇನ್ನೊಂದು ಬೆಳ್ಳಿ
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಅಪಾಯದಲ್ಲಿದ್ದವನನ್ನು ರಕ್ಷಿಸಿದ್ದಕ್ಕೆ ವ್ಯಕ್ತಿಯನ್ನು ಶ್ಲಾಘಿಸಿದ್ದಾರೆ. ಈ ವಿಡಿಯೋಗೆ 1.4 ಲಕ್ಷ ಲೈಕ್ ಗಳು ಬಂದಿವೆ. ಈ ವ್ಯಕ್ತಿಗೆ ಶೌರ್ಯಕ್ಕಾಗಿ ಪದಕ ನೀಡಬೇಕು ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ.
https://www.youtube.com/watch?v=p_kLO0q7Fwk