ಹೈದರಾಬಾದ್: ವಿಷ ಹಾಕಿ 300 ಶ್ವಾನಗಳನ್ನು ಹತ್ಯೆ ಮಾಡಲಾಗಿದೆ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಇಂತಹದೊಂದು ಅಮಾನವೀಯ ಘಟನೆ ನಡೆದಿದೆ.
ಲಿಂಗಪಾಲೆಂ ಗ್ರಾಮದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿತ್ತು. ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರು. ಪಂಚಾಯಿತಿಯವರು ವಿಷವುಣಿಸಿ 300 ಬೀದಿನಾಯಿಗಳನ್ನು ಕೊಂದು ಹೊಂಡದಲ್ಲಿ ಹೂತು ಹಾಕಿದ್ದಾರೆ. ಪ್ರಾಣಿದಯಾ ಸಂಘದ ಲಲಿತ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ನಾಯಿಗಳನ್ನು ಕೊಂದ ಪಂಚಾಯಿತಿ ವಿರುದ್ಧ ಧರ್ಮಾಜಿಗೊಡೆಂ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.