ಪ್ರಖ್ಯಾತ ಒಟಿಟಿ ವೇದಿಕೆಗಳಲ್ಲಿ ಒಂದಾದ ಡಿಸ್ನೆ + ಹಾಟ್ಸ್ಟಾರ್ ಭಾರತದಲ್ಲಿ ಹೊಸ ಮೂರು ವಾರ್ಷಿಕ ಯೋಜನೆಗಳನ್ನು ಪರಿಚಯಿಸಿದೆ. ಮೊಬೈಲ್ನಲ್ಲಿ ಅಪ್ಲಿಕೇಶನ್ ಬಳಸುವವರಿಗೆ ವಾರ್ಷಿಕ 499 ರೂಪಾಯಿ, ಸೂಪರ್ ಪ್ಲಾನ್ಗೆ 899 ರೂಪಾಯಿ ಹಾಗೂ ಪ್ರಿಮೀಯಂ ಪ್ಲಾನ್ಗೆ ವಾರ್ಷಿಕ 1499 ರೂಪಾಯಿ ನಿಗದಿ ಮಾಡಲಾಗಿದೆ. ಈ ಹೊಸ ಮೂರು ಯೋಜನೆಗಳು ಸೆಪ್ಟೆಂಬರ್ 1ನೇ ತಾರೀಖಿನಿಂದ ಜಾರಿಗೆ ಬರಲಿದೆ ಎಂದು ಕಂಪನಿ ಹೇಳಿದೆ.
ಹೊಸ ಪ್ಲಾನ್ಗಳ ಬಗ್ಗೆ ಇನ್ನಷ್ಟು ಮಾಹಿತಿ ನೀಡೋದ್ರ ಜೊತೆ ದಿ ಎಂಪೈರ್, ಹ್ಯೂಮನ್, ಎಸ್ಕೇಯ್ಪ್ ಲಿವ್, ಸಿಟಿ ಆಫ್ ಡ್ರೀಮ್ಸ್ ಸೀಸನ್ 2 ಸೇರಿದಂತೆ ಇನ್ನೂ ಹಲವು ಹೊಸ ಶೋಗಳನ್ನು ಆರಂಭಿಸುತ್ತಿರೋದ್ರ ಬಗ್ಗೆ ಮಾಹಿತಿ ನೀಡಿದೆ.
899 ರೂಪಾಯಿ ಮೌಲ್ಯದ ಸೂಪರ್ ಪ್ಲಾನ್ ಮೂಲಕ ಒಂದೇ ಬಾರಿಗೆ ಹೆಚ್ಡಿ ವಿಡಿಯೋ ಕ್ವಾಲಿಟಿಯ ಮೂಲಕ 2 ಸಾಧನಗಳಲ್ಲಿ ಡಿಸ್ನೆ + ಹಾಟ್ಸ್ಟಾರ್ ಬಳಕೆ ಮಾಡಬಹುದಾಗಿದೆ. ಅದೇ ರೀತಿ 499 ರೂಪಾಯಿ ಪ್ಲಾನ್ನಲ್ಲಿ ಕೇವಲ 1 ಮೊಬೈಲ್ನಲ್ಲಿ ಮಾತ್ರ ವೀಕ್ಷಣೆಗೆ ಅವಕಾಶವಿದೆ. ಇನ್ನು ಪ್ರೀಮಿಯಂ ಪ್ಲಾನ್ ಮೂಲಕ ನಾಲ್ಕು ಡಿವೈಸ್ಗಳಲ್ಲಿ ಡಿಸ್ನೆ + ಹಾಟ್ಸ್ಟಾರ್ ವೀಕ್ಷಣೆ ಮಾಡಬಹುದಾಗಿದೆ.