ಕ್ಷೀಣಿಸುತ್ತಿರುವ ರೋಗ ನಿರೋಧಕ ಶಕ್ತಿ, ಲಾಕ್ಡೌನ್ ಸಡಿಲಿಕೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕೊರೊನಾ ಮೂರನೆ ಅಲೆಯು ಗಂಭೀರ ಪರಿಣಾಮವನ್ನ ಉಂಟು ಮಾಡಬಲ್ಲದು ಎಂದು ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಕಳವಳ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಫೇಸ್ ಮಾಸ್ಕ್ ಬಳಕೆ, ಕೊರೊನಾ ಲಸಿಕೆ ತೆಗೆದುಕೊಳ್ಳುವುದು ಸೇರಿದಂತೆ ಕೊರೊನಾ ಮಾರ್ಗಸೂಚಿಗಳ ಸರಿಯಾದ ಪಾಲನೆಯಿಂದ ಮಾತ್ರ ಕೊರೊನಾ ಮೂರನೆ ಅಲೆಯಿಂದ ಪಾರಾಗಲು ಸಾಧ್ಯ ಎಂದು ರಂದೀಪ್ ಗುಲೇರಿಯಾ ಹೇಳಿದ್ದಾರೆ.
ಕೊರೊನಾ ತಡೆಯಲು ಇರುವ ಎಲ್ಲಾ ನಿರ್ಬಂಧಗಳನ್ನ ತೆಗೆದು ಹಾಕಿದಲ್ಲಿ ರೋಗ ನಿರೋಧಕ ಶಕ್ತಿಯು ಕೊರೊನಾ ರೂಪಾಂತರಿಗಳ ವಿರುದ್ಧ ಹೋರಾಡಲು ಯಶಸ್ವಿಯಾಗದೇ ಹೋದರೆ ಕೊರೊನಾ ಮೂರನೇ ಅಲೆಯು ಎರಡನೆ ಅಲೆಗಿಂತಲೂ ಭೀಕರವಾಗಿ ಇರಲಿದೆ. ಹೀಗಾಗಿ ಕೊರೊನಾ ಮೂರನೇ ಅಲೆಯನ್ನ ನಿಯಂತ್ರಣದಲ್ಲಿ ಇಡಲು ಕೋವಿಡ್ ಮಾರ್ಗಸೂಚಿಗಳ ಪಾಲನೆ ಅತ್ಯಗತ್ಯ ಎಂದು ಹೇಳಿದ್ದಾರೆ .