alex Certify BIG NEWS: ಡಿಸಿಜಿಐ ಸೂಚನೆ ಬಳಿಕವೂ ತುರ್ತು ಅನುಮೋದನೆಗೆ ಅರ್ಜಿ ಸಲ್ಲಿಸದ ಫೈಜರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡಿಸಿಜಿಐ ಸೂಚನೆ ಬಳಿಕವೂ ತುರ್ತು ಅನುಮೋದನೆಗೆ ಅರ್ಜಿ ಸಲ್ಲಿಸದ ಫೈಜರ್

ಕೊರೊನಾ ಲಸಿಕೆಯ ತುರ್ತು ಬಳಕೆಗೆ ಪರವಾನಗಿ ಕೇಳಿ ಅರ್ಜಿ ಸಲ್ಲಿಸುವಂತೆ ಡ್ರಗ್​ ಕಂಟ್ರೋಲರ್​ ಜನರಲ್​ ಆಫ್​ ಇಂಡಿಯಾ ಫೈಜರ್​, ಜಾನ್ಸನ್​ & ಜಾನ್ಸನ್​ ಕಂಪನಿಗಳಿಗೆ ಸೂಚನೆ ನೀಡಿದೆ. ಈ ರೀತಿ ಅರ್ಜಿ ಸಲ್ಲಿಸೋದ್ರಿಂದ ತುರ್ತು ಅನುಮತಿ ನೀಡೋದು ಸುಲಭವಾಗುತ್ತದೆ. ಆದರೆ ಫಾರ್ಮಾ ಕಂಪನಿಗಳು ಇಲ್ಲಿಯವರೆಗೆ ಅರ್ಜಿ ಸಲ್ಲಿಕೆ ಮಾಡಿಲ್ಲ.

ಡ್ರಗ್​ ರೆಗ್ಯೂಲೇಟರ್​ ಜನರಲ್​ ಆಫ್​ ಇಂಡಿಯಾ ಅರ್ಜಿ ಸಲ್ಲಿಸುವಂತೆ ಮಾಡಿದ ಸೂಚನೆಗೆ ಫಾರ್ಮಾ ಕಂಪನಿಗಳು ನಾವು ಈ ಬಗ್ಗೆ ಕೆಲಸ ಮಾಡ್ತಿರೋದಾಗಿ ಹೇಳಿವೆ ಎನ್ನಲಾಗಿದೆ.

ಇನ್ನೊಂದು ದೈತ್ಯ ಫಾರ್ಮಾ ಕಂಪನಿ ಮಾಡೆರ್ನಾ ಶೀಘ್ರದಲ್ಲೇ ಭಾರತಕ್ಕೆ 7 ಮಿಲಿಯನ್​ ಡೋಸ್​ ಲಸಿಕೆಗಳನ್ನ ನೀಡಲಿದೆ. ಮಾಡೆರ್ನಾ ಲಸಿಕೆಗಳಿಗೆ ಡಿಸಿಜಿಐ ಅನುಮತಿ ನೀಡಿದ್ದು ಅಮೆರಿಕದಿಂದ ಈ ಲಸಿಕೆಗಳನ್ನ ದೇಶಕ್ಕೆ ತರಿಸಿ ವಿತರಣೆ ಮಾಡುವ ಜವಾಬ್ದಾರಿಯನ್ನ ಸಿಪ್ಲಾ ಕಂಪನಿ ಹೊತ್ತುಕೊಂಡಿದೆ.

ಕೆಲ ದಿನಗಳ ಹಿಂದಷ್ಟೇ ಲಸಿಕೆಗಳ ವಿಚಾರವಾಗಿ ಮಾತನಾಡಿದ ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪಾಲ್​, ಆರಂಭಿಕ ಹಂತದ ಮಾತುಕತೆ ನಡೆದಿದೆ. ಆದರೆ ಫಾರ್ಮಾ ಕಂಪನಿಗಳಿಂದ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಸಕಾರಾತ್ಮಕ ಬೆಳವಣಿಗೆ ಇದೆ ಎಂದು ಹೇಳಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...