ಮುಂಬೈನಲ್ಲಿ ನಡೆದ ನಕಲಿ ಲಸಿಕಾ ವಿತರಣೆ ಅಭಿಯಾನದಲ್ಲಿ ಭಾಗಿಯಾಗಿದ್ದವರಲ್ಲಿ ಒಬ್ಬರು ಇದೀಗ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.
31 ವರ್ಷದ ಜೈನಾ ಸಾಂಘವಿ ಎಂಬವರನ್ನ ಜುಲೈ 10ರಂದು ಕೊರೊನಾದಿಂದಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೇ 30ರಂದು ಕಂಡಿವ್ಲಿಯ ಹಿರಾನಂದಾನಿ ಹೆರಿಟೇಜ್ ಹೌಸಿಂಗ್ ಸೊಸೈಟಿಯಲ್ಲಿ ನಕಲಿ ಲಸಿಕೆ ಪಡೆದ 390 ಮಂದಿಯಲ್ಲಿ ಇವರೂ ಸಹ ಒಬ್ಬರಾಗಿದ್ದಾರೆ.
ಸಾಂಘವಿಗೆ ಈಗಾಗಲೇ ಸಾಕಷ್ಟು ಚಿಕಿತ್ಸೆಯನ್ನ ನೀಡಲಾಗಿದೆ. ರೆಮ್ಡಿಸಿವರ್ ಸೇರಿದಂತೆ ಸಾಕಷ್ಟು ದುಬಾರಿ ಚುಚ್ಚು ಮದ್ದುಗಳನ್ನ ಸಾಂಘವಿಗೆ ನೀಡಿರೋದ್ರಿಂದ ಆಸ್ಪತ್ರೆ ಬಿಲ್ ಲಕ್ಷಕ್ಕೂ ಮೀರಿ ಹೋಗಿದೆ ಎಂದು ವರದಿಗಳು ತಿಳಿಸಿವೆ.
ಆರ್ಥಿಕ ಸಂಕಷ್ಟ ಒಂದೆಡೆಯಾದರೆ, ಈ ಸಮಯದಲ್ಲಿ ನನ್ನ ಆರು ವರ್ಷದ ಮಗಳನ್ನ ದೂರವಿಡಬೇಕಲ್ಲಾ ಎಂಬ ನೋವು ನನ್ನನ್ನ ಇನ್ನಷ್ಟು ಕಾಡುತ್ತಿದೆ. ನನ್ನ ಮಗಳು ಯಾವಾಗಲು ಶೀತದ ಸಮಸ್ಯೆಯಿಂದ ಬಳಲೋದ್ರಿಂದ ಆಕೆಯನ್ನ ನಾನು ಯಾವುದೇ ಕಾರಣಕ್ಕೂ ದೂರವಿಡಲೇಬೇಕು. ನಾನು ಸಹ ಎಲ್ಲರಂತೆ ಲಸಿಕೆ ಪಡೆದುಕೊಳ್ಳಲು ಹೋಗಿ ನಕಲಿ ಲಸಿಕೆ ಪಡೆಯುವಂತಾಯ್ತು ಎಂದು ಮಹಿಳೆ ಹೇಳಿದ್ದಾರೆ.