ಕೊಲೆ ಆರೋಪಿಯೊಬ್ಬ ಕೋರ್ಟ್ ನಲ್ಲಿ ವಿಚಾರಣೆ ನಡೆಯುವಾಗಲೇ ತಪ್ಪಿಸಿಕೊಳ್ಳಲು ಯತ್ನಿಸಿದ ವಿಡಿಯೋ ವೈರಲ್ ಆಗಿದೆ.
ನ್ಯಾಯಾಲಯದ ಆವರಣದಲ್ಲಿನ ಸೀಲಿಂಗ್ ಮೂಲಕ ಆರೋಪಿ ಲಿಯೊನಿಡ್ ನುಸುಳುತ್ತಾನೆ. ತನ್ನನ್ನು ಯಾರೂ ನೋಡಿಲ್ಲ ಎಂದು ಭಾವಿಸಿ ಅಲ್ಲಿಂದ ಪರಾರಿಯಾಗಲು ಯತ್ನಿಸುತ್ತಿದ್ದಾಗ ಭದ್ರತಾ ಸಿಬ್ಬಂದಿ ಗಮನಿಸಿದರು.
ಆತ ಪಾರದರ್ಶಕ ವ್ಯವಸ್ಥೆ ಇದ್ದ ಕಟೆಕಟೆ ಮೇಲಿನ ಸೀಲಿಂಗ್ ಒಳಗೆ ತೂರಿ ತುಂಬಾ ದೂರ ಹೋಗುವ ಮೊದಲು ಭದ್ರತಾ ಸಿಬ್ಬಂದಿ ಕಾಲನ್ನು ಹಿಡಿದು ಕೊಂಡಿದ್ದಾರೆ. ಹೀಗೆ ಎಳೆಯುವಾಗ ಪ್ಯಾಂಟ್ ಕೂಡ ಕಳಚಿತು. ಮೂವರು ಭದ್ರತಾ ಸಿಬ್ಬಂದಿ ಆತನನ್ನು ಹಿಡಿದುಕೊಳ್ಳಲು ಹರಸಾಹಸ ಪಡಬೇಕಾಯಿತು.
PES ವಿವಿ ಇತಿಹಾಸದಲ್ಲೇ ಮೊದಲ ಬಾರಿಗೆ ವಿದ್ಯಾರ್ಥಿಗೆ 1.5 ಕೋಟಿ ಪ್ಯಾಕೇಜ್
ಒಬ್ಬ ಅಧಿಕಾರಿ ಲಿಯೊನಿಡ್ನ ಪ್ಯಾಂಟ್ ಹಿಡಿಯುತ್ತಿದ್ದರೆ, ಇನ್ನೊಬ್ಬನು ಅವನಿಗೆ ಲಾಠಿಯಿಂದ ಹೊಡೆಯುತ್ತಾನೆ. ಇನ್ನೊಬ್ಬ ಅಧಿಕಾರಿ ಮತ್ತೊಂದು ಕಡೆಯಿಂದ ತಡೆಯಲು ಯತ್ನಿಸಿದರು. ತನ್ನ ಸಹೋದರಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ರಷ್ಯಾದ ಹದಿನೆಂಟು ವರ್ಷದ ಲಿಯೊನಿಡ್ ವಿಚಾರಣೆಗೊಳಪಟ್ಟಿದ್ದ.
6.4 ಕೋಟಿ ರೂಪಾಯಿಗೆ ಮಾರಾಟವಾದ 1987 ರ ವಿಡಿಯೋ ಗೇಮ್
ಈ ಘಟನೆಯ ವಿಡಿಯೋ ಮೊದಲ ಬಾರಿಗೆ 2019ರಲ್ಲಿ ವೈರಲ್ ಆಗಿದೆ. ಇದು ಇತ್ತೀಚೆಗೆ ಟಿಕ್ಟಾಕ್ನಲ್ಲಿ ಪುನಃ ವೈರಲ್ ಆಯಿತು.
https://www.youtube.com/watch?v=pr5sFlCJ-MY