ಕೊರೊನಾದಿಂದ ಸಾವಿಗೀಡಾಗೋದನ್ನ ತಡೆಯುವುದರಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳ ಎರಡು ಡೋಸ್ಗಳು 98 ಪ್ರತಿಶತ ಪರಿಣಾಮಕಾರಿಯಾಗಿದೆ. ಕೇವಲ ಒಂದು ಡೋಸ್ ಲಸಿಕೆಯು ಕೊರೊನಾ ಸಾವಿನ ವಿರುದ್ಧ 92 ಪ್ರತಿಶತ ಪರಿಣಾಮಕಾರಿ ಎಂದು ಎಂದು ಕೇಂದ್ರ ಸರ್ಕಾರ ಹೇಳಿದೆ. ಪಂಜಾಬ್ನಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ನಡೆಸಲಾದ ಸಮೀಕ್ಷೆ ಆಧರಿಸಿ ಕೇಂದ್ರ ಸರ್ಕಾರ ಈ ಹೇಳಿಕೆ ನೀಡಿದೆ.
ಪಂಜಾಬ್ ಸರ್ಕಾರದ ಸಹಯೋಗದೊಂದಿಗೆ ಚಂಡೀಗಢ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯು ಈ ಅಧ್ಯಯನವನ್ನ ಕೈಗೊಂಡಿತ್ತು.
ಈ ಅಧ್ಯಯನದ ದತ್ತಾಂಶಗಳನ್ನ ಬಹಿರಂಗಪಡಿಸಿದ ನೀತಿ ಆಯೋಗದ ಸದಸ್ಯ ಡಾ. ವಿಕೆ ಪೌಲ್, 4868 ಪೊಲೀಸರು ಲಸಿಕೆಯನ್ನ ಪಡೆದಿರಲಿಲ್ಲ. ಇದರಲ್ಲಿ 15 ಮಂದಿ ಕೊರೊನಾದಿಂದ ಸಾವಿಗೀಡಾಗಿದ್ದಾರೆ ಎಂದು ಹೇಳಿದ್ರು.
ಕೊರೊನಾ ಮೊದಲ ಡೋಸ್ ಪಡೆದ 35,856 ಪೊಲೀಸ್ ಅಧಿಕಾರಿಗಳಲ್ಲಿ ಸಾವಿನ ಪ್ರಮಾಣ 0.25 ಪ್ರತಿಶತವಿದ್ದರೆ ಎರಡೂ ಡೋಸ್ 42,720 ಪೊಲೀಸರಲ್ಲಿ ಸಾವಿನ ಪ್ರಮಾಣ ಪ್ರತಿ ಸಾವಿರ ಮಂದಿಯಲ್ಲಿ 0.05 ಪ್ರತಿಶತ ಮಾತ್ರ ಇದೆ ಎಂದು ಹೇಳಿದ್ದಾರೆ.
ಈ ಅಧ್ಯಯನದಿಂದ ದೊರೆತ ಫಲಿತಾಂಶವನ್ನ ನೋಡಿದಾಗ ಕೊರೊನಾ ಲಸಿಕೆಯು ಸೋಂಕಿನ ಗಂಭೀರ ಲಕ್ಷಣ ಹಾಗೂ ಸಾವಿನ ಪ್ರಮಾಣವನ್ನ ಕಡಿಮೆ ಮಾಡುತ್ತೆ ಅನ್ನೋದು ಸ್ಪಷ್ಟವಾಗಿದೆ. ಹೀಗಾಗಿ ಕೊರೊನಾ ಲಸಿಕೆಗಳ ಮೇಲೆ ನಂಬಿಕೆ ಇಡಿ ಎಂದು ಪೌಲ್ ಹೇಳಿದ್ರು.