ಸ್ಕ್ಯೂಬಾ ಡೈವರ್ ಜೆನಿಫರ್ ಡೌವ್ಕರ್ ಇತ್ತೀಚೆಗೆ ಡೈವಿಂಗ್ ಮಾಡಲು ಹೊರಟಿದ್ದ ವೇಳೆ 1926ನೇ ಇಸವಿ ಹಳೆಯ ಬಾಟಲಿಯೊಂದನ್ನು ಕಂಡಿದ್ದು, ಅದರೊಳಗಿದ್ದ ನೋಟ್ ಒಂದರ ಚಿತ್ರಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ದಾಸವಾಳ ಹೂವಿನಿಂದ ಇದೆ ಇಷ್ಟೆಲ್ಲಾ ʼಪ್ರಯೋಜನʼ
ಮಿಷಿಗನ್ನ ಚೆಬೋಯಗನ್ ನದಿಯಲ್ಲಿ ತಮ್ಮ ದೋಣಿಯನ್ನು ಕ್ಲೀನ್ ಮಾಡಲೆಂದು ಡೈವ್ ಮಾಡಿದ ಆಕೆಗೆ ಈ ಬಾಟಲಿ ಸಿಕ್ಕಿದೆ. “ಈ ಬಾಟಲಿಯನ್ನು ಪತ್ತೆ ಮಾಡುವ ವ್ಯಕ್ತಿ ಈ ಪತ್ರವನ್ನು ಮಿಷಿಗನ್ನ ಜಾರ್ಜ್ ಮಾರ್ರೋ ಚೆಬೋಗ್ಯಾನ್ಗೆ ಹಿಂದಿರುಗಿಸಿ, ಅದು ಎಲ್ಲಿ ಸಿಕ್ಕಿತೆಂದು ಆತನಿಗೆ ಹೇಳಬಲ್ಲಿರಾ.?” ಎಂದು ಪತ್ರದಲ್ಲಿ ನೋಟ್ ಬರೆಯಲಾಗಿದೆ.
ಹುಬ್ಬೇರಿಸುತ್ತೆ ಸ್ವಂತ ಮನೆಯನ್ನೇ ಈತ ಸುಟ್ಟು ಹಾಕಿರುವುದರ ಹಿಂದಿನ ಕಾರಣ
ತಮ್ಮ ನಾಟಿಕಲ್ ನಾರ್ತ್ ಫ್ಯಾಮಿಲಿ ಅಡ್ವೆಂಚರ್ಸ್ ಬೋಟಿಂಗ್ ಕಂಪನಿಯ ಫೇಸ್ಬುಕ್ ಖಾತೆಯಲ್ಲಿ ಈ ಚಿತ್ರಗಳನ್ನು ಶೇರ್ ಮಾಡಿಕೊಂಡಿರುವ ಜೆನಿಫರ್, “ನೋಡಿ ನನಗೆ ಏನು ಸಿಕ್ಕಿದೆ. ಕೂಲೆಸ್ಟ್ ನೈಟ್ ಡೈವಿಂಗ್ ಇದು” ಎಂದು ಪೋಸ್ಟ್ ಮಾಡಿದ್ದಾರೆ.
https://www.facebook.com/Straitsarea/posts/4445010612176862
https://www.facebook.com/Straitsarea/posts/4453151764696080