alex Certify ಪೆಟ್ರೋಲ್‌ ಬೆಲೆ ಏರಿಕೆಯಿಂದ ಕಂಗೆಟ್ಟವರಿಗೆ ಭರ್ಜರಿ ‌ʼಗುಡ್‌ ನ್ಯೂಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೆಟ್ರೋಲ್‌ ಬೆಲೆ ಏರಿಕೆಯಿಂದ ಕಂಗೆಟ್ಟವರಿಗೆ ಭರ್ಜರಿ ‌ʼಗುಡ್‌ ನ್ಯೂಸ್ʼ

ದೇಶದಲ್ಲಿ ಇಂಧನ ದರ ಮುಗಿಲು ಮುಟ್ಟಿದೆ. ಹೀಗಾಗಿ ಸಾರ್ವಜನಿಕರು ಕಂಗೆಟ್ಟಿದ್ದಾರೆ. ಅಂತವರಿಗೆ ಶುಭ ಸುದ್ದಿಯೊಂದು ಇಲ್ಲಿದೆ.

ಓಲಾ ಕಂಪನಿಯ ಎಲೆಕ್ಟ್ರಿಕ್​ ಸ್ಕೂಟರ್​ ಕಾರ್ಖಾನೆ ನಿರ್ಮಾಣದ ಮೊದಲ ಹಂತವು ಪೂರ್ಣಗೊಳ್ಳುವುದರಲ್ಲಿದೆ ಹಾಗೂ ಶೀಘ್ರದಲ್ಲಿಯೇ ದೇಶಿ ಮಾರುಕಟ್ಟೆಯಲ್ಲಿ ವಾಹನಗಳನ್ನ ಹೊರತರಲು ಕಂಪನಿಯು ಕಾತುರದಿಂದ ಕಾಯುತ್ತಿದೆ‌ ಎಂದು ಓಲಾ ಗ್ರೂಪ್​ ಸಿಇಓ ಭವೀಶ್​ ಅಗರ್​ವಾಲ್​ ಹೇಳಿದ್ದಾರೆ.

ಟ್ವಿಟರ್​ನಲ್ಲಿ ಈ ವಿಚಾರ ಶೇರ್​ ಮಾಡಿರುವ ಅಗರ್​ವಾಲ್​, ಕೇವಲ ನಾಲ್ಕು ತಿಂಗಳಲ್ಲಿ ಈ ಖಾಲಿ ಸ್ಥಳವು ವಿಶ್ವದ ಅತಿದೊಡ್ಡ ಕಾರ್ಖಾನೆಯಾಗಿ ಮಾರ್ಪಟ್ಟಿದೆ. ಓಲಾ ಫ್ಯೂಚರ್​ ಫ್ಯಾಕ್ಟರಿ ಹಂತ 1 ಪೂರ್ಣಗೊಳ್ಳುವುದರಲ್ಲಿದೆ. ಸ್ಕೂಟರ್​ ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬರಲಿದೆ ಎಂದು ಬರೆದಿದ್ದಾರೆ.

BIG BREAKING NEWS: ರಾಜ್ಯದಲ್ಲಿಂದು 4272 ಜನರಿಗೆ ಸೋಂಕು, 115 ಮಂದಿ ಸಾವು

ಕಳೆದ ವರ್ಷ, ಓಲಾ ಕಂಪನಿಯು 2400 ಕೋಟಿ ರೂಪಾಯಿ ಮೌಲ್ಯದಲ್ಲಿ ತಮಿಳುನಾಡಿನಲ್ಲಿ ಎಲೆಕ್ಟ್ರಿಕ್​ ಸ್ಕೂಟರ್​ ಕಾರ್ಖಾನೆಯನ್ನ ಸ್ಥಾಪನೆ ಮಾಡುವ ಬಗ್ಗೆ ಘೋಷಣೆ ಮಾಡಿತ್ತು.

ಭವೀಶ್​ ಕಾರ್ಖಾನೆ ಫೋಟೋವನ್ನೂ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಕಾರ್ಖಾನೆ ಸಂಪೂರ್ಣ ನಿರ್ಮಾಣವಾದ ಬಳಿಕ 10 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗಾವಕಾಶ ನೀಡುವ ಉದ್ದೇಶವನ್ನ ಓಲಾ ಕಂಪನಿ ಹೊಂದಿದೆ. ಓಲಾ ಕಂಪನಿಯು ಪ್ರಸ್ತುತ ಹೈಪರ್​ಚಾರ್ಜರ್​​ ನೆಟ್​ವರ್ಕ್​ ಗಾಗಿ ಕೆಲಸ ಮಾಡುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...