ಡ್ರೈವಿಂಗ್ ಮಾಡುವುದು ಅನೇಕ ಮಂದಿಗೆ ಭಾರೀ ಮೆಚ್ಚಿನ ಹವ್ಯಾಸ. ಆದರಲ್ಲೂ ರಜೆಯಲ್ಲಿರುವ ವೇಳೆ ವಿದೇಶೀ ನೆಲಗಳಲ್ಲಿ ಡ್ರೈವಿಂಗ್ ಮಾಡುವುದು ಉಳ್ಳವರ ಕಾಸ್ಟ್ಲಿ ಹವ್ಯಾಸಗಳಲ್ಲಿ ಒಂದು.
ಭಾರತದ ಚಾಲನಾ ಪರವನಾಗಿ ಇಟ್ಟುಕೊಂಡು ಈ ದೇಶಗಳಲ್ಲಿ ಡ್ರೈವಿಂಗ್ ಮಾಡಬಹುದಾಗಿದೆ.
ʼಹ್ಯಾಂಡ್ ಬ್ಯಾಗ್ʼ ನಲ್ಲಿರಲೇಬೇಕು ಈ ವಸ್ತುಗಳು….!
1. ಜರ್ಮನಿಯಲ್ಲಿ ನೀವು ಭಾರತದ ಡ್ರೈವಿಂಗ್ ಲೈಸೆನ್ಸ್ ಇಟ್ಟುಕೊಂಡು ಆರು ತಿಂಗಳ ಮಟ್ಟಿಗೆ ಡ್ರೈವಿಂಗ್ ಮಾಡಬಹುದಾಗಿದೆ. ಆದರೆ ಇದಕ್ಕೆ ನಿಮ್ಮ ಪರವಾನಗಿ ಇಂಗ್ಲಿಷ್ ಅಥವಾ ಜರ್ಮನ್ ಭಾಷೆಯಲ್ಲಿರಬೇಕು.
2. ಬ್ರಿಟನ್‌ನಲ್ಲಿ ನೀವು ಭಾರತದ ಡ್ರೈವಿಂಗ್ ಲೈಸೆನ್ಸ್ ಇಟ್ಟುಕೊಂಡು ಒಂದು ವರ್ಷದ ಮಟ್ಟಿಗೆ ಡ್ರೈವಿಂಗ್ ಮಾಡಬಹುದು.
3. ಆಸ್ಟ್ರೇಲಿಯಾದಲ್ಲಿ ಭಾರತದ ಲೈಸೆನ್ಸ್ ಇಟ್ಟುಕೊಂಡು ಮೂರು ತಿಂಗಳು ವಾಹನ ಚಾಲನೆ ಮಾಡಬಹುದು. ಜೊತೆಗೆ ಭಾರತದಲ್ಲಿಯಂತೆ ಆಸ್ಟ್ರೇಲಿಯಾದಲ್ಲೂ ಸಹ ರಸ್ತೆಯ ಎಡಬದಿಯಲ್ಲಿ ವಾಹನ ಚಾಲನೆ ಮಾಡಬೇಕು.
ಈಗಲೇ ಶಾಲೆಗಳ ಆರಂಭ ಸರಿಯೇ; ಟಾಸ್ಕ್ ಫೋರ್ಸ್ ಮುಖ್ಯಸ್ಥ ವಿ.ಕೆ.ಪೌಲ್ ಹೇಳಿದ್ದೇನು….?
4. ಸುಂದರ ರಸ್ತೆಗಳನ್ನು ಹೊಂದಿರುವ ನ್ಯೂಜಿಲೆಂಡ್‌ನಲ್ಲಿ ವಿದೇಶೀ ಡ್ರೈವಿಂಗ್ ಲೈಸೆನ್ಸ್ ಇಟ್ಟುಕೊಂಡು ನೀವು ಒಂದು ವರ್ಷದ ಮಟ್ಟಿಗೆ ಡ್ರೈವಿಂಗ್ ಮಾಡಬಹುದು. ಜೊತೆಗೆ ನೀವು ಓಡಿಸಬಹುದಾದ ವಾಹನಗಳ ವಿಚಾರದಲ್ಲಿ ಕೆಲವು ಇತಿಮಿತಿಗಳಿವೆ.
5. ಸ್ವಿಜರ್ಲೆಂಡ್‌ನಲ್ಲೂ ಸಹ ಭಾರತದ ಲೈಸೆನ್ಸ್‌ನ ಇಂಗ್ಲಿಷ್ ಕಾಪಿ ಇದ್ದರೆ ನೀವು ಒಂದು ವರ್ಷ ಡ್ರೈವಿಂಗ್ ಮಾಡಬಹುದಾಗಿದೆ.
6. ದಕ್ಷಿಣ ಆಫ್ರಿಕಾದ ಸುಂದರ ಊರುಗಳನ್ನು ಡ್ರೈವಿಂಗ್ ಮಾಡಿಕೊಂಡು ಓಡಾಡಲು ನಿಮ್ಮ ಬಳಿ ಭಾರತೀಯ ಲೈಸೆನ್ಸ್ ಇದ್ದರೆ ಸಾಧ್ಯ.
7. ಇಂಗ್ಲಿಷ್, ಸ್ವೀಡಿಶ್, ಜರ್ಮನ್, ಫ್ರೆಂಚ್ ಅಥವಾ ನಾರ್ವೇಯನ್ ಭಾಷೆಗಳ ಪೈಕಿ ಒಂದರಲ್ಲಿ ನಿಮ್ಮ ಲೈಸೆನ್ಸ್ ಇದ್ದರೆ ಸ್ವೀಡನ್‌ನಲ್ಲಿ ನೀವು ಡ್ರೈವಿಂಗ್ ಮಾಡಬಹುದಾಗಿದೆ.
8. ಸಿಂಗಪುರದಲ್ಲಿ ಒಂದು ವರ್ಷದ ಮಟ್ಟಿಗೆ ಭಾರತದ ಲೈಸೆನ್ಸ್ ನಡೆಯಲಿದೆ.
9. ಹಾಂಕಾಂಗ್ ಸಹ ಒಂದು ವರ್ಷದ ಮಟ್ಟಿಗೆ ನಿಮಗೆ ಭಾರತದ ಲೈಸೆನ್ಸ್ ಆಧಾರದ ಮೇಲೆ ವಾಹನ ಚಾಲನೆ ಮಾಡಲು ಅವಕಾಶ ಕೊಡುತ್ತದೆ.
10. ಮಲೇಷ್ಯಾದಲ್ಲಿರುವ ಭಾರತೀಯ ರಾಯಭಾರ ಕಾರ್ಯಾಲಯದ ಅನುಮತಿ ಪಡೆದುಕೊಂಡು ಭಾರತೀಯ ಲೈಸೆನ್ಸ್ ಆಧಾರದಲ್ಲಿ ನೀವು ಆ ದೇಶದಲ್ಲಿ ಡ್ರೈವಿಂಗ್ ಮಾಡಬಹುದಾಗಿದೆ.