ಬೆಂಗಳೂರು: ಆಸ್ತಿ ತೆರಿಗೆಯಲ್ಲಿ ಶೇಕಡ 5 ರಷ್ಟು ವಿನಾಯಿತಿಯೊಂದಿಗೆ ದಂಡವಿಲ್ಲದೇ ಪಾವತಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಾವತಿಸುವ 2021 -22 ನೇ ಸಾಲಿನ ಆರ್ಥಿಕ ವರ್ಷದ ಆಸ್ತಿ ತೆರಿಗೆ ಮೇಲಿನ ಶೇಕಡ 5 ರಷ್ಟು ವಿನಾಯಿತಿ ಹಾಗೂ ವಿಳಂಬದ ಅವಧಿಗೆ ದಂಡ ವಿಧಿಸುವ ಅವಧಿಯನ್ನು ಜೂನ್ 30 ರವರೆಗೆ ವಿಸ್ತರಿಸಲಾಗಿದ್ದು, ಕೊರೋನಾ ಕಾರಣದಿಂದಾಗಿ ಜುಲೈ 31 ರವರೆಗೆ ವಿಸ್ತರಿಸಲಾಗಿದೆ.
ಆಸ್ತಿ ತೆರಿಗೆ ಪಾವತಿಸದವರು ಜುಲೈ 31ರೊಳಗೆ ಶೇಕಡ 5 ರಷ್ಟು ವಿನಾಯಿತಿಯೊಂದಿಗೆ ತೆರಿಗೆ ಪಾವತಿಸಬಹುದಾಗಿದೆ. ಆಸ್ತಿ ತೆರಿಗೆ ಪಾವತಿಸದಿದ್ದರೆ ಜುಲೈ ನಂತರ ವಿಳಂಬದ ಅವರಿಗೆ ಮಾಸಿಕ ಶೇಕಡ 2 ರಷ್ಟು ದಂಡ ವಿಧಿಸಲಾಗುವುದು. ಆಗಸ್ಟ್ 1 ರಿಂದ ಇದನ್ನು ಅನ್ವಯಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.