ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಲಸಿಕೆ ಪ್ರಮುಖ ಅಸ್ತ್ರವಾಗಿದೆ. ಲಸಿಕೆ ಅಭಿಯಾನವು ಜನವರಿಯಿಂದ ನಡೆಯುತ್ತಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆ ಬರ್ತಿದ್ದಂತೆ ಲಸಿಕೆ ಪಡೆದವರೂ ಸೋಂಕಿಗೆ ಒಳಗಾಗಿದ್ದಾರೆ. ಲಸಿಕೆ ಪಡೆದ ನಂತ್ರ ಕೊರೊನಾ ವೈರಸ್ ಬರುವುದಿಲ್ಲವೆಂದು ತಜ್ಞರು ಹೇಳಿಲ್ಲ. ಕೊರೊನಾ ಲಸಿಕೆ, ವೈರಸ್ ಅಪಾಯವನ್ನು ತಪ್ಪಿಸಲಿದೆ.
ಕೊರೊನಾ ಲಸಿಕೆ ನಂತ್ರವೂ ಜನರು ಕೊರೊನಾಗೆ ತುತ್ತಾಗಲು ಕಾರಣವೇನು ಎಂಬುದನ್ನು ಡಾ. ಫಹೀಮ್ ಯೂನಸ್ ಹೇಳಿದ್ದಾರೆ. ಕೊರೊನಾ ಅನೇಕ ರೂಪಾಂತರವಿರುವುದು ಒಂದು ಕಾರಣವಾದ್ರೆ, ಲಸಿಕೆ ಈ ರೂಪಾಂತರಗಳಲ್ಲಿ ಕಡಿಮೆ ಕೆಲಸ ಮಾಡುವ ಸಾಧ್ಯತೆ ಇರುವುದು ಇನ್ನೊಂದು ಕಾರಣವೆಂದು ಅವರು ಹೇಳಿದ್ದಾರೆ.
ಇದರ ಹೊರತಾಗಿಯೂ ಜನರು ಲಸಿಕೆ ತೆಗೆದುಕೊಳ್ಳಬೇಕೆಂದು ಅವರು ಸಲಹೆ ನೀಡಿದ್ದಾರೆ. ಇದು ಕೊರೊನಾದ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದವರು ತಿಳಿಸಿದ್ದಾರೆ.
ಕೊರೊನಾದ ಒಂದು ಡೋಸ್ ಲಸಿಕೆ ತೆಗೆದುಕೊಂಡ ನಂತ್ರ ನಾವು ಸಂಪೂರ್ಣ ಸುರಕ್ಷಿತರಲ್ಲ. ಎರಡನೇ ಡೋಸ್ ಪಡೆದ 15 ದಿನಗಳ ನಂತರ ವೈರಸ್ ವಿರುದ್ಧ ಹೋರಾಡಲು ನಮ್ಮ ದೇಹ ಸಾಮರ್ಥ್ಯ ಪಡೆಯುತ್ತದೆ. ಎರಡು ಲಸಿಕೆ ನಂತ್ರವೂ ಹಲವು ದಿನಗಳವರೆಗೆ ಸಂಪೂರ್ಣ ಕಾಳಜಿ ವಹಿಸುವುದು ಅವಶ್ಯಕ. ಲಸಿಕೆ ಪಡೆದ ನಂತರ ಯಾರಾದರೂ ಸೋಂಕಿಗೆ ಒಳಗಾಗಿದ್ದರೆ, ವೈರಸ್ ನ ಗಂಭೀರ ಪರಿಣಾಮ ಕಾಣುವುದಿಲ್ಲ.