ಮೈಸೂರು: ಕೊರೊನಾ ಮೂರನೇ ಅಲೆ ಆತಂಕ ಹಾಗೂ ಮಕ್ಕಳಲ್ಲಿಯೂ ಸೋಂಕು ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿಯೂ ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ ಆರಂಭವಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 30 ಮಕ್ಕಳ ಮೇಲೆ ಲಸಿಕೆ ಪ್ರಯೋಗ ಮಾಡಲಾಗಿದೆ.
30 ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ಹಾಕಲಾಗಿದ್ದು, ಕಳೆದ 6 ದಿನಗಳಿಂದ ಮಕ್ಕಳು ಆರೋಗ್ಯವಾಗಿದ್ದಾರೆ. ಇಬ್ಬರು ಮಕ್ಕಳು ಮಾತ್ರ ಲಸಿಕೆ ಪಡೆದ ಬಳಿಕ ಜ್ವರದಿಂದ ಬಳಲುತ್ತಿದ್ದು, ಉಳಿದ ಮಕ್ಕಳಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ಚೆಲುವಾಂಬಾ ಆಸ್ಪತ್ರೆ ಮಾಹಿತಿ ನೀಡಿದೆ.
ಶಾಕಿಂಗ್ ನ್ಯೂಸ್: ಮದುವೆಯಾಗದೆ ಮಗುವಿಗೆ ಜನ್ಮ ನೀಡಿದ ಯುವತಿ, ಹೆರಿಗೆ ನಂತ್ರ ಬಯಲಾಯ್ತು ರಹಸ್ಯ
ವಯಸ್ಕರರಿಗೆ ನೀಡಲಾಗುವ ಪ್ರಮಾಣದಲ್ಲಿಯೇ ಮಕ್ಕಳಿಗೂ ಡೋಸ್ ನೀಡಲಾಗಿದ್ದು, ವೈದ್ಯರು ಪ್ರತಿದಿನ ಮಕ್ಕಳ ಆರೋಗ್ಯ ವಿಚಾರಣೆ ನಡೆಸಿದ್ದಾರೆ. ಒಂದು ತಿಂಗಳ ಬಳಿಕ ಲಸಿಕೆ ಪಡೆದ ಮಕ್ಕಳ ರಕ್ತದ ಮಾದರಿ ಸಂಗ್ರಹಿಸಿ, ವ್ಯಾಕ್ಸಿನ್ ಪರಿಣಾಮದ ಬಗ್ಗೆ ಪರೀಕ್ಷಿಸಲಾಗುತ್ತದೆ. ವರದಿ ಬಂದ ಬಳಿಕ 2ನೇ ಡೋಸ್ ನಿಡಲಾಗುತ್ತದೆ. ರಾಜ್ಯದಲ್ಲಿ ಒಟ್ಟು 175 ಮಕ್ಕಳ ಮೇಲೆ ವ್ಯಾಕ್ಸಿನ್ ಪ್ರಯೋಗ ನಡೆದಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.