ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆಯೇ ಇಲ್ಲ ಎಂದು ಖುಷಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಇದೀಗ ಪಿಯು ಬೋರ್ಡ್ ಶಾಕ್ ನೀಡಿದ್ದು, ಆನ್ ಲೈನ್ ಪರೀಕ್ಷೆ ನಡೆಸುವುದಾಗಿ ಘೋಷಿಸಿದೆ.
ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಪರೀಕ್ಷೆ ನಡೆಸಲಾಗುವುದು. 2 ವಿಷಯಗಳಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಮಾದರಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಎಲ್ಲಾ ಕಾಲೇಜುಗಳಿಗೆ ಪಿಯು ಬೋರ್ಡ್ ಸುತ್ತೋಲೆ ಹೊರಡಿಸಿದೆ.
ಈ ಮೊದಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಈ ಬಾರಿ ಪ್ರಥಮ ಪಿಯು ಪರೀಕ್ಷೆ ರದ್ದುಗೊಳಿಸಲಾಗಿದ್ದು, ಪರೀಕ್ಷೆ ಇಲ್ಲದೇಯೇ ವಿದ್ಯಾರ್ಥಿಗಳನ್ನು ಪಾಸ್ ಮಾಡುವುದಾಗಿ ಹೇಳಿದ್ದರು. ಆದರೆ ಈಗ ಏಕಾಏಕಿ ಪಿಯು ಬೋರ್ಡ್ ಆನ್ ಲೈನ್ ಪರೀಕ್ಷೆ ಘೋಷಿಸಿದೆ.