ಕೊಲ್ಕೊತ್ತಾ: ಕೊರೋನಾ ಲಸಿಕೆ ಪಡೆದವರ ಸ್ಥಿರ ಠೇವಣಿಗಳಿಗೆ ಬ್ಯಾಂಕುಗಳಿಂದ ಹೆಚ್ಚುವರಿ ಬಡ್ಡಿದರದ ಆಫರ್ ನೀಡಲಾಗಿದೆ.
ದೇಶದಲ್ಲಿ ಕೊರೋನಾ ವ್ಯಾಕ್ಸಿನೇಷನ್ ಉತ್ತೇಜಿಸುವ ಉದ್ದೇಶದಿಂದ ಕೆಲವು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರ ಘೋಷಿಸಲಾಗಿದೆ. ಸೀಮಿತ ಅವಧಿಯವರೆಗೆ ಇದು ಮಾನ್ಯವಾಗಿರುತ್ತದೆ.
ಕೊರೋನಾ ಲಸಿಕೆಯ ಒಂದು ಡೋಸ್ ಪಡೆದ ಗ್ರಾಹಕರಿಗೆ ಸ್ಥಿರ ಠೇವಣಿಗಳ ಮೇಲೆ 30 ಬೇಸಿಸ್ ಪಾಯಿಂಟ್ ಅಥವಾ ಶೇಕಡ 0.30 ರಷ್ಟು ಹೆಚ್ಚಿನ ಬಡ್ಡಿದರ ನೀಡುವುದಾಗಿ ಯುಕೋ ಬ್ಯಾಂಕ್ ಮಾಹಿತಿ ನೀಡಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ಕೊರೋನಾ ಲಸಿಕೆ ಪಡೆದವರಿಗೆ 25 ಬೇಸಿಸ್ ಪಾಯಿಂಟ್ ಗಳ ಹೆಚ್ಚುವರಿ ಬಡ್ಡಿದರ ನೀಡುವುದಾಗಿ ಹೇಳಿತ್ತು.