alex Certify ದಂಗಾಗಿಸುವಂತಿದೆ ಈ ಮಾವಿನ ಹಣ್ಣಿನ ಬೆಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುವಂತಿದೆ ಈ ಮಾವಿನ ಹಣ್ಣಿನ ಬೆಲೆ….!

ಮಧ್ಯ ಪ್ರದೇಶದ ಅಲಿರಾಜ್ಪುರ ಜಿಲ್ಲೆಯಲ್ಲಿ ಬೆಳೆಯಲಾಗುವ ’ನೂರ್‌ಜಹಾನ್’ ಹೆಸರಿನ ಈ ತಳಿಯ ಮಾವಿನಹಣ್ಣುಗಳು ತಮ್ಮ ಗಾತ್ರ ಹಾಗೂ ರುಚಿಯ ಕಾರಣದಿಂದ ಭಾರೀ ಬೆಲೆಗೆ ಮಾರಾಟವಾಗುತ್ತಿವೆ.

ಈ ಸೀಸನ್‌ನಲ್ಲಿ ಒಂದು ’ನೂರ್‌ಜಹಾನ್‌’ ಮಾವಿನಹಣ್ಣು 500-1000 ರೂ.ಗಳಿಗೆ ಮಾರಾಟವಾಗುತ್ತಿದೆ ಎಂದು ಬೆಳೆಗಾರರೊಬ್ಬರಾದ ಶಿವರಾಜ್ ಸಿಂಗ್ ಜಾಧವ್ ತಿಳಿಸಿದ್ದಾರೆ. ಈ ಬಾರಿ ಅನುಕೂಲಕರ ವಾತಾವರಣವಿದ್ದ ಕಾರಣ ಈ ಮಾವಿನಹಣ್ಣುಗಳ ಫಸಲು ಚೆನ್ನಾಗಿ ಬಂದಿದೆ.

ಅಫ್ಘನ್ ಮೂಲದ ನಂಟು ಹೊಂದಿರುವ ಈ ಮಾವಿನ ಹಣ್ಣುಗಳನ್ನು ಜಿಲ್ಲೆಯ ಕಟ್ಟಿವಾಡಾ ಪ್ರದೇಶದಲ್ಲಿ ಮಾತ್ರವೇ ಬೆಳೆಯಲಾಗುತ್ತದೆ.

ತಲಾ 2.5-3 ಕೆಜಿ ತೂಗುವ ಈ ಹಣ್ಣುಗಳನ್ನು ಮಧ್ಯ ಪ್ರದೇಶ ಹಾಗೂ ನೆರೆಯ ಗುಜರಾತ್‌ನ ಮಾವು ಪ್ರಿಯರು ಮುಂಗಡ ಬುಕಿಂಗ್ ಮಾಡಿ ತರಿಸಿಕೊಳ್ಳುತ್ತಾರೆ ಎನ್ನುತ್ತಾರೆ ಜಾಧವ್.

ಜನವರಿ-ಫೆಬ್ರವರಿಯಲ್ಲಿ ಹೂವು ಬಿಡುವ ಈ ತಳಿಯು ಜೂನ್‌ ತಿಂಗಳಲ್ಲಿ ಹಣ್ಣಾಗಲು ಆರಂಭಿಸುತ್ತದೆ. ಒಂದು ಅಡಿಯಷ್ಟು ಉದ್ದ ಬೆಳೆಯುವ ನೂರ್‌ಜಹಾನ್ ಹಣ್ಣಿನ ಬೀಜಗಳೇ 150-200 ಗ್ರಾಂ ಇರುತ್ತವೆ ಎಂದು ಸ್ಥಳೀಯ ಬೇಸಾಯಗಾರರು ತಿಳಿಸುತ್ತಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...