ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಪೈಕಿ 68%ರಷ್ಟು ಮಂದಿ ವೈಯಕ್ತಿಕ ಹಾಗೂ ಆಫೀಸ್ ಕೆಲಸಕ್ಕೆಂದು ಒಂದೇ ಸ್ಮಾರ್ಟ್‌ಫೋನ್ ಬಳಸುತ್ತಾರೆ; ಇದೇ ವೇಳೆ 32%ನಷ್ಟು ಮಂದಿ ವೈಯಕ್ತಿಕ ಉದ್ದೇಶಕ್ಕೆ ಒಂದು ಹಾಗೂ ಆಫೀಸ್ ಕೆಲಸಕ್ಕೆ ಒಂದು ಪ್ರತ್ಯೇಕ ಸ್ಮಾರ್ಟ್‌ಫೋನ್ ಬಳಸುತ್ತಾರೆ ಎಂದು ಗೂಗಲ್ ನೇತೃತ್ವದ ಅಧ್ಯಯನವೊಂದು ತಿಳಿಸಿದೆ.
ಕೋವಿಡ್ ಲಾಕ್‌ಡೌನ್ ಕಾರಣದಿಂದಾಗಿ ಹೆಚ್ಚಿನ ಮಂದಿ ಮನೆಯಿಂದಲೇ ಕೆಲಸ ಮಾಡುತ್ತಿರುವ ವೇಳೆ, 70%ರಷ್ಟು ಮಂದಿ ತಮ್ಮ ಆಫೀಸ್ ಕೆಲಸಕ್ಕೆ ಹಾಗೂ ವೈಯಕ್ತಿಕ ಬಳಕೆಗೆ ತಮ್ಮ ಫೋನ್‌ಗಳಲ್ಲಿ ನಿರ್ದಿಷ್ಟ ಯೂಸರ್ ಇಂಟರ್‌ಫೇಸ್ (ಯುಐ) ಬಳಸುವ ಮೂಲಕ ವೈಯಕ್ತಿಕ ಹಾಗೂ ಕಚೇರಿಯ ಕೆಲಸಕ್ಕೆ ಬೇಕಾದ ಅಪ್ಲಿಕೇಶನ್‌ಗಳು ಹಾಗೂ ದತ್ತಾಂಶಗಳನ್ನು ಪ್ರತ್ಯೇಕವಾಗಿಟ್ಟುಕೊಳ್ಳುತ್ತಾರೆ ಎಂದು ತಿಳಿದು ಬಂದಿದೆ.
ಹಣದ ಹೊಳೆಯಾಗ್ಬೇಕೆಂದ್ರೆ ಮನೆಯ ಈ ದಿಕ್ಕಿನಲ್ಲಿರಲಿ ಮನಿ ಪ್ಲಾಂಟ್
“ಕೆಲಸ ಹಾಗೂ ವೈಯಕ್ತಿಕ ಅಪ್ಲಿಕೇಶನ್‌ಗಳ ನಡುವೆ ಸ್ಪಷ್ಟವಾದ ಪ್ರತ್ಯೇಕತೆ ಮೂಡಿಬಂದಲ್ಲಿ, ಉದ್ಯೋಗಿಗಳ ಡಿಜಿಟಲ್ ಆರೋಗ್ಯ ಹಾಗೂ ವೃತ್ತಿ-ವೈಯಕ್ತಿಕ ಜೀವನಗಳ ನಡುವೆ ಸಮತೋಲನ ಕಂಡುಬರುತ್ತದೆ” ಎಂದು ಕ್ವಾಲ್ಟ್ರಿಕ್ಸ್ ಸಹಯೋಗದಲ್ಲಿ ಗೂಗಲ್ ನಡೆಸಿದ ಅಧ್ಯಯನ ತಿಳಿಸಿದೆ.
ಆರೋಗ್ಯದ ಜೊತೆ ‘ಅದೃಷ್ಟ’ ಬದಲಾಯಿಸುತ್ತೆ ಸ್ವಲ್ಪ ಹಾಲು
ಕೆಲಸಕ್ಕೆಂದೇ ಪ್ರತ್ಯೇಕ ಸ್ಮಾರ್ಟ್‌ಫೋನ್ ನಿಭಾಯಿಸುವ ಮಂದಿಯಲ್ಲಿ, ತಮ್ಮ ವೈಯಕ್ತಿಕ ಹಾಗೂ ಕೆಲಸ ಸಂಬಂಧ ಮಾಹಿತಿಗಳನ್ನು ಪ್ರತ್ಯೇಕವಾಗಿಡುವ ಮೂಲಕ ಎರಡನ್ನೂ ಸುರಕ್ಷಿತವಾಗಿ ಇಡಬಹುದು ಎಂದು ನಿರಾಳ ಭಾವನೆ ಇರುತ್ತದೆ ಎಂದು ಅಧ್ಯಯನ ತಿಳಿಸಿದೆ.