ಕಿವಿ ಹಣ್ಣು ತಿನ್ನಲು ರುಚಿ. ಆರೋಗ್ಯಕ್ಕೂ ಒಳ್ಳೆಯದು. ಕಿವಿ ಹಣ್ಣಿನಲ್ಲಿ ಜೀವಸತ್ವಗಳು, ಸಿ, ಇ, ಕೆ, ಪೊಟ್ಯಾಸಿಯಮ್, ಆಂಟಿ-ಆಕ್ಸಿಡೆಂಟ್, ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇದರಲ್ಲಿದೆ.
ಕಿವಿ ಜ್ಯೂಸ್ ಗೆ ಬೇಕಾಗುವ ಪದಾರ್ಥ :
ಕಿವಿ ಹಣ್ಣು – 4
ಸಕ್ಕರೆ – 2 ಚಮಚ
ನೀರು – 2 ಕಪ್
ರುಚಿಗೆ ಉಪ್ಪು
ಕಿವಿ ಜ್ಯೂಸ್ ಮಾಡುವ ವಿಧಾನ :
ಕಿವಿ ಹಣ್ಣಿನ ಸಿಪ್ಪೆ ತೆಗೆದು ಅದನ್ನು ಕತ್ತರಿಸಿ. ನಂತ್ರ ಸಕ್ಕರೆ ಮತ್ತು ನೀರನ್ನು ಹಾಕಿ ಗ್ರೈಂಡ್ ಮಾಡಿ. ಜರಡಿ ಹಿಡಿದು ಗ್ಲಾಸ್ ಗೆ ಹಾಕಿ. ಅದಕ್ಕೆ ಸ್ವಲ್ಪ ಉಪ್ಪು ಮತ್ತು ಐಸ್ ಹಾಕಿ ಸರ್ವ್ ಮಾಡಿ.
ಕಿವಿ ಜ್ಯೂಸ್ ನಿಂದ ರಕ್ತದ ಪ್ಲೇಟ್ಲೆಟ್ಗಳು ಹೆಚ್ಚಾಗುತ್ತವೆ. ರೋಗ ನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ. ಕಿವಿ ಜ್ಯೂಸ್ ರಕ್ತದೊತ್ತಡ ಶಕ್ತಿಯನ್ನು ಹೆಚ್ಚಿಸುತ್ತದೆ. ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಮಲಬದ್ಧತೆ ಕಡಿಮೆ ಮಾಡುವ ಜೊತೆಗೆ ತೂಕ ಇಳಿಸಲು ನೆರವಾಗುತ್ತದೆ.