ಕೋವಿಡ್ 19ರ ಎರಡನೇ ಅಲೆಯ ಕಾರಣದಿಂದ ಕರ್ಫ್ಯೂ ಮತ್ತು ಲಾಕ್ಡೌನ್ ಬಹುತೇಕ ರಾಜ್ಯಗಳಲ್ಲಿದೆ. ಇಂತಹ ಸಂದರ್ಭದಲ್ಲಿ ಅನೇಕರು ತಮ್ಮ ಡಿಎಲ್ (ಚಾಲನಾ ಪರವಾನಗಿ) ಪ್ರಕ್ರಿಯೆ ಪೂರ್ಣಗೊಳಿಸಲು ಅಥವಾ ಆರ್ಸಿ (ನೋಂದಣಿ ಪ್ರಮಾಣಪತ್ರ) ಪಡೆಯಲು ಸಾಧ್ಯವಾಗುತ್ತಿಲ್ಲ. ಹಲವು ರಾಜ್ಯಗಳಲ್ಲಿ ಆರ್ಟಿಒ ಕಚೇರಿಗಳೂ ಸಹ ಮುಚ್ಚಲ್ಪಟ್ಟಿವೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಭೂ ಸಾರಿಗೆ, ಹೆದ್ದಾರಿ ಸಚಿವಾಲಯವು ಡಿಲ್, ಆರ್ಸಿಗೆ ಸಂಬಂಧಪಟ್ಟ ಹೊಸ ಅರ್ಜಿ ಅಥವಾ ನವೀಕರಣಕ್ಕಾಗಿ ಹೊಸ ಮಾರ್ಗಸೂಚಿ ಪ್ರಕಟಿಸಿ, ದಿನಾಂಕಗಳನ್ನು ವಿಸ್ತರಿಸಿದೆ.
ಅದೇ ರೀತಿ ಆರ್ಟಿಒ ಸೇವೆಗಳನ್ನು ಸಂಪೂರ್ಣವಾಗಿ ಆನ್ಲೈನ್ನಲ್ಲಿ ಕೂಡ ಪಡೆಯಬಹುದು. ಅಧಿಕೃತ ಆರ್ಟಿಒ ವೆಬ್ಸೈಟ್ಗೆ ಭೇಟಿ ನೀಡಿದರೆ https://parivahan.gov.in/parivahan/ ಮುಖಪುಟದಲ್ಲಿ, ಪಡೆಯಲು ಬಯಸುವ ಸೇವೆಯ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಉದಾಹರಣೆಗೆ: ಎಲ್ ಎಲ್ ಆರ್ ಪರವಾನಗಿಗಾಗಿ ಅರ್ಜಿ ಸಲ್ಲಿಸಲು ಬಯಸಿದರೆ “ಚಾಲಕರು/ ಕಲಿಕಾ ಪರವಾನಗಿ” ಆಯ್ಕೆ ಆಯ್ಕೆ ಮಾಡಬೇಕಾಗುತ್ತದೆ.
ಕೊರೋನಾ ಲಸಿಕೆ ಮೊದಲ ಡೋಸ್ ಪಡೆಯುವ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: 45 ವರ್ಷ ಮೇಲ್ಪಟ್ಟವರಿಗೆ ಸಿಗಲಿದೆ ಫಸ್ಟ್ ಡೋಸ್
ಮುಂದಿನ ಪೇಜ್ನಲ್ಲಿ ರಾಜ್ಯವನ್ನು ಆಯ್ಕೆ ಮಾಡಬೇಕಾಗುತ್ತದೆ. ಬಳಿಕ ಈ ಆಯ್ಕೆ ಆಧಾರದ ಮೇಲೆ ಸೌಲಭ್ಯವು ಸಂಪೂರ್ಣವಾಗಿ ಆನ್ಲೈನ್ನಲ್ಲಿ ಲಭ್ಯವಿದೆಯೇ ಎಂದು ಪರಿಶೀಲಿಸಬಹುದು.
ಹೊಸ ನಿಯಮದ ಪ್ರಕಾರ ಬಹತೇಕ ಪ್ರಕ್ರಿಯೆಯು ಆನ್ಲೈನ್ನಲ್ಲಿದೆ. ಇ- ಪ್ರಮಾಣಪತ್ರ, ಕಲಿಕಾ ಪರವಾನಗಿ, ಚಾಲನಾ ಪರವಾನಗಿ ಮತ್ತು ಅದರ ನವೀಕರಣಕ್ಕಾಗಿ ಅವಕಾಶ ನೀಡಲಾಗಿದೆ. ಇನ್ನೂ ಹಲವು ಅವಕಾಶ ಮಾಡಿಕೊಡಲಾಗಿದೆ.