ಐದು ತಿಂಗಳ ಮಗನ ಅಪರೂಪದ ಕಾಯಿಲೆಗೆ ಚಿಕಿತ್ಸೆ ನೀಡಲು ಗುಜರಾತ್ ದಂಪತಿಗಳು ಕ್ರೌಡ್ ಫಂಡಿಂಗ್ ಮೂಲಕ 16 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ. ಮಗುವಿನ ತಂದೆ ರಾಜ್‌ದೀಪ್ ಸಿಂಗ್ ರಾಥೋಡ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಚುಚ್ಚುಮದ್ದನ್ನು ನೀಡಲಾಗಿದ್ದು, ಮಗ ಗುಣಮುಖನಾಗುವ ನಿರೀಕ್ಷೆಯಿದೆ ಎಂದು ರಾಜ್ ದೀಪ್ ಹೇಳಿದ್ದಾರೆ.
ಗುಜರಾತ್‌ನ ಮಹಿಸಾಗರ್ ಜಿಲ್ಲೆಯಲ್ಲಿ 5 ತಿಂಗಳ ಮಗು ಅಪರೂಪದ ಆನುವಂಶಿಕ ಕಾಯಿಲೆ ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿದೆ. ಇದರಲ್ಲಿ ದೇಹದ ಸ್ನಾಯುಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ರೋಗಿಗೆ ಉಸಿರಾಡಲು ಸಹ ಸಾಧ್ಯವಾಗುವುದಿಲ್ಲ. ಈ ರೋಗವು ಮಾರಣಾಂತಿಕವೆಂದು ಸಾಬೀತಾಗಿದೆ.
ಮಗು ಹುಟ್ಟಿದ ಒಂದು ತಿಂಗಳ ನಂತರ ಮಗುವಿನ ಕೈ ಕಾಲು ಚಲಿಸುತ್ತಿಲ್ಲ ಎಂಬುದು ಗೊತ್ತಾಗಿತ್ತು. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ವೇಳೆ ಬೆನ್ನು ಸ್ನಾಯು ಕ್ಷೀಣತೆ ಟೈಪ್-1 ಇರುವುದು ಪತ್ತೆಯಾಯ್ತು. ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಕಾಯಿಲೆಯ ಚಿಕಿತ್ಸೆಗೆ ಒಂದು ಬಾರಿ ಇಂಜೆಕ್ಷನ್ ನೀಡಲಾಗುತ್ತದೆ. Zolgensma ಇಂಜೆಕ್ಷನ್ ನೀಡಲಾಗುತ್ತದೆ. ಈ ಇಂಜೆಕ್ಷನ್ ಬೆಲೆ ಸುಮಾರು 22 ಕೋಟಿ ರೂಪಾಯಿ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ರಾಜ್‌ದೀಪ್‌ಗೆ ಅಷ್ಟೊಂದು ಹಣ ನೀಡುವುದು ಕಷ್ಟವಾಗಿತ್ತು. ಜನರಿಂದ ಸಹಾಯ ಕೋರಿದರು. 42 ದಿನಗಳಲ್ಲಿ ಸುಮಾರು 16 ಕೋಟಿ ಹಣವನ್ನು ಸಂಗ್ರಹಿಸಿದ್ದಾರೆ.
ಲಸಿಕೆಯ ಬೆಲೆ 22 ಕೋಟಿ ರೂಪಾಯಿ. ಆದರೆ ಅದರ ಮೇಲಿನ ಕಸ್ಟಮ್ಸ್ ಸುಂಕ 6.5 ಕೋಟಿ ರೂಪಾಯಿ ಮನ್ನಾ ಮಾಡಲಾಗಿದೆ. ರಾಜ್ ದೀಪ್ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ.