alex Certify ಕೊರೊನಾ ರೋಗಿಗಳಿಗೆ ಆರೋಗ್ಯ ಸಚಿವಾಲಯದಿಂದ ಹೊಸ ಮಾರ್ಗಸೂಚಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ರೋಗಿಗಳಿಗೆ ಆರೋಗ್ಯ ಸಚಿವಾಲಯದಿಂದ ಹೊಸ ಮಾರ್ಗಸೂಚಿ

 

ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಮಧ್ಯೆ, ಆರೋಗ್ಯ ಸಚಿವಾಲಯವು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಕೊರೊನಾ ಸೌಮ್ಯ ಲಕ್ಷಣ ಅಥವಾ ಲಕ್ಷಣವಿಲ್ಲದ ರೋಗಿಗಳು ಮನೆಯಲ್ಲಿ ಹೇಗೆ ಚಿಕಿತ್ಸೆ ಪಡೆಯಬೇಕೆಂದು ಹೊಸ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಇದ್ರ ಜೊತೆಗೆ ಮಕ್ಕಳ ಬಗ್ಗೆಯೂ ಇದ್ರಲ್ಲಿ ತಿಳಿಸಲಾಗಿದೆ.

ಮನೆಯಲ್ಲಿರುವ ರೋಗಿಗಳು ನಿರಂತರವಾಗಿ ವೈದ್ಯರ ಸಂಪರ್ಕದಲ್ಲಿರಬೇಕು. ಆರೋಗ್ಯದಲ್ಲಿ ಏರುಪೇರಾದಲ್ಲಿ ತಕ್ಷಣ ವೈದ್ಯರಿಗೆ ಇದ್ರ ಬಗ್ಗೆ ಮಾಹಿತಿ ನೀಡಬೇಕೆಂದು ಸರ್ಕಾರ ಹೇಳಿದೆ. ರೋಗಿಗಳಿಗೆ ಬೇರೆ ರೋಗವಿದ್ದಲ್ಲಿ ಕೊರೊನಾ ಮಾತ್ರೆ ಜೊತೆ ಅದನ್ನು ತೆಗೆದುಕೊಳ್ಳಬೇಕು. ಈ ಬಗ್ಗೆ ವೈದ್ಯರ ಬಳಿ ಚರ್ಚಿಸಬೇಕು.

ಜ್ವರ, ನೆಗಡಿ, ಕೆಮ್ಮು ಕಾಡ್ತಿದ್ದರೆ ಕೊರೊನಾ ವರದಿ ಬರುವವರೆಗೆ ಕಾಯದೆ ಕೊರೊನಾ ಚಿಕಿತ್ಸೆ ಶುರು ಮಾಡಬೇಕು. ಬಿಸಿ ನೀರಿನಲ್ಲಿ ರೋಗಿಗಳು ಗಾರ್ಗಲ್ ಮಾಡಬೇಕು. ಹಾಗೆ ಬಿಸಿ ನೀರಿನ ಶಾಖವನ್ನು ತೆಗೆದುಕೊಳ್ಳಬೇಕು.

ಸೋಂಕಿತರಿಗೆ ಧೈರ್ಯ ತುಂಬಲು ಗಿಟಾರ್​ ನುಡಿಸಿದ ನರ್ಸ್

ದಿನದಲ್ಲಿ ನಾಲ್ಕು ಬಾರಿ ಪ್ಯಾರಾಸಿಟಮೊಲ್  (650 ಎಂಜಿ) ಮಾತ್ರೆ ತೆಗೆದುಕೊಂಡ ನಂತ್ರವೂ ಜ್ವರ ಕಡಿಮೆಯಾಗದೆ ಹೋದಲ್ಲಿ ರೋಗಿ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರು ನ್ಯಾಪ್ರೊಕ್ಸೆನ್ ನಂತಹ ಮಾತ್ರೆಯನ್ನು ದಿನಕ್ಕೆ ಎರಡು ಬಾರಿ ತೆಗೆದುಕೊಳ್ಳಲು ಸಲಹೆ ನೀಡಬಹುದು. ಇದಲ್ಲದೆ ಮೂರದಿಂದ ಐದು ದಿನ ಐವರ್ಮೆಕ್ಟಿನ್ ಮಾತ್ರೆ ನೀಡುವ ಸಾಧ್ಯತೆಯಿದೆ.

ಒಂದು ವೇಳೆ ಐದು ದಿನಕ್ಕಿಂತ ಹೆಚ್ಚು ದಿನ ಕಫ, ಉಸಿರಾಟದ ಸಮಸ್ಯೆಯಿದ್ದಲ್ಲಿ ಬುಡೆಸೊನೈಡ್ ಇನ್ ಹೇಲರ್ ಮಾತ್ರೆ ತೆಗೆದುಕೊಳ್ಳಲು ಸಲಹೆ ನೀಡಬಹುದು. 800 ಎಂಜಿಯ ಈ ಮಾತ್ರೆಯನ್ನು ದಿನಕ್ಕೆ ಎರಡು ಬಾರಿಯಂತೆ ಇನ್ ಹೇಲರ್ ಮಾಡಲು ನೀಡಬಹುದೆಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಹಾಗೆ ಮನೆಯಲ್ಲಿರುವ ರೋಗಿಗಳು ಯಾವುದೇ ಕಾರಣಕ್ಕೂ ರೆಮಿಡಿಸಿವಿರ್ ಮನೆಯಲ್ಲಿ ತೆಗೆದುಕೊಳ್ಳಬಾರದು. ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಲ್ಲಿ ಇದನ್ನು ತೆಗೆದುಕೊಳ್ಳಬೇಕೆಂದು ಹೇಳಲಾಗಿದೆ. ಆಕ್ಸಿಜನ್ ಪ್ರಮಾಣ ಕಡಿಮೆಯಾಗ್ತಿದ್ದರೆ ವೈದ್ಯರನ್ನು ಭೇಟಿಯಾಗಿ ಆಸ್ಪತ್ರೆಗೆ ದಾಖಲಾಗಿ ಎಂದು ಸೂಚನೆ ನೀಡಲಾಗಿದೆ.

ಮಕ್ಕಳಲ್ಲಿ ಕೊರೊನಾ ಲಕ್ಷಣ ರಹಿತವಾಗಿದ್ದರೆ ಚಿಕಿತ್ಸೆ ಅಗತ್ಯವಿಲ್ಲ. ಆದ್ರೆ ಮಕ್ಕಳ ಆರೋಗ್ಯದ ಬಗ್ಗೆ ಗಮನ ನೀಡಬೇಕು. ಅವ್ರ ಲಕ್ಷಣ ಗಮನಿಸಿ ಅವರಿಗೆ ಚಿಕಿತ್ಸೆ ನೀಡಲಾಗುವುದು. ಸಣ್ಣ ಪ್ರಮಾಣದಲ್ಲಿ ಜ್ವರ, ನೆಗಡಿ, ಕೆಮ್ಮಿದ್ದಲ್ಲಿ ಮನೆಯಲ್ಲಿಯೇ ಚಿಕಿತ್ಸೆ ನೀಡಬಹುದು. ಪ್ಯಾರಾಸಿಟಾಮೊಲ್ ( 10-15 ಎಂಜಿ) ಮಾತ್ರೆಯನ್ನು ದಿನದಲ್ಲಿ 4-6 ಗಂಟೆಗೊಮ್ಮೆ ನೀಡಬೇಕು. ಬಿಸಿ ನೀರಿನಲ್ಲಿ ಗಾರ್ಗಲ್ ಮಾಡಬೇಕು. ಮಕ್ಕಳಿಗೆ ಹೆಚ್ಚಿನ ದ್ರವ ಆಹಾರವನ್ನು ನೀಡಬೇಕು. ವೈದ್ಯರ ಸಲಹೆಯಿಲ್ಲದೆ ಯಾವುದೇ ಮಾತ್ರೆಯನ್ನು ಮಕ್ಕಳಿಗೆ ನೀಡಬೇಡಿ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಅಗತ್ಯವೆನಿಸಿದ್ರೆ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕು. ಮಕ್ಕಳಿಗೆ 94ಕ್ಕಿಂತ ಕಡಿಮೆ ಆಕ್ಸಿಜನ್ ಮಟ್ಟವಿದ್ದಲ್ಲಿ ಅವರಿಗೆ ಆಕ್ಸಿಜನ್ ಸಪ್ಲಿಮೆಂಟರಿ ನೀಡಬೇಕಾಗುತ್ತದೆ ಎಂದು ಹೇಳಲಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...