ದೇಹಕ್ಕೆ ಕಡಿಮೆ ಕೊಬ್ಬು ಹಾಗೂ ಅತ್ಯಧಿಕ ಪ್ರಮಾಣದಲ್ಲಿ ಶಕ್ತಿಯನ್ನ ಒದಗಿಸುವ ಒಣದ್ರಾಕ್ಷಿ ಸೇವನೆ ತುಂಬಾನೇ ಒಳ್ಳೆಯದು. ಅದರಲ್ಲೂ ಚಳಿಗಾಲದ ಸಂದರ್ಭದಲ್ಲಿ ನೀವು ಒಣ ದ್ರಾಕ್ಷಿಯನ್ನ ಸೇವಿಸೋದ್ರಿಂದ ನಿಮ್ಮ ದೇಹ ಬೆಚ್ಚಗೆ ಇರಲಿದೆ. ಆದರೆ ಒಣ ದ್ರಾಕ್ಷಿಯನ್ನ ನೀವು ಸರಿಯಾದ ರೀತಿಯಲ್ಲಿ ಸೇವಿಸದೇ ಇದ್ದಲ್ಲಿ ಹಲವು ಕಾಯಿಲೆಗಳನ್ನ ನೀವಾಗಿಯೇ ಬರ ಮಾಡಿಕೊಳ್ಳುವ ಸಾಧ್ಯತೆ ಇರಲಿದೆ.
ಅನೇಕರು ಒಣ ದ್ರಾಕ್ಷಿಯನ್ನ ನೆನೆಸಿ ತಿನ್ನುವ ಅಭ್ಯಾಸ ಹೊಂದಿರ್ತಾರೆ. ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯ ಮಾರ್ಗವಾಗಿದೆ. ಒಣ ದ್ರಾಕ್ಷಿಯನ್ನ ನೆನೆಸೋದ್ರಿಂದ ಅದರಲ್ಲಿರುವ ಆಂಟಿ ಆಕ್ಸಿಡಂಟ್ ಹಾಗೂ ಪೋಷಕಾಂಶಗಳು ಹೆಚ್ಚಾಗಲಿದೆ.
ಒಣ ದ್ರಾಕ್ಷಿಯಲ್ಲಿ ರಾತ್ರಿ ಪೂರ್ತಿ ನೆನೆಸಿ ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ. ಇದರಿಂದ ನಿಮ್ಮ ದೇಹ ಇಡೀ ದಿನ ಆರೋಗ್ಯದಿಂದ ಇರಲಿದೆ.
25 ಗ್ರಾಂ ಒಣದ್ರಾಕ್ಷಿಯಲ್ಲಿ 78 ಗ್ರಾಂ ಕ್ಯಾಲೋರಿ ಹಾಗೂ 0.83 ಗ್ರಾಂ ಪ್ರೋಟೀನ್ ಇದೆ. ಅಲ್ಲದೇ ಆಂಟಿ ಆಕ್ಸಿಡಂಟ್, ವಿಟಾಮಿನ್ ಬಿ, ಪೊಟ್ಯಾಷಿಯಂ, ಕ್ಯಾಲ್ಶಿಯಂ, ಮ್ಯಾಗ್ನೀಷಿಯಂ ಹಾಗೂ ಫೈಬರ್ ಅಂಶ ಕೂಡ ಅಡಗಿದೆ.
ಒಣ ದ್ರಾಕ್ಷಿಯನ್ನ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡೋದ್ರಿಂದ ರಕ್ತದೊತ್ತಡ ಹತೋಟಿಗೆ ಬರಲಿದೆ. ಇದರಲ್ಲಿರುವ ಪೊಟ್ಯಾಷಿಯಂ ದೇಹದಲ್ಲಿ ಉಪ್ಪಿನ ಪ್ರಮಾಣವನ್ನ ಸರಿದೂಗಿಸುವ ಮೂಲಕ ರಕ್ತದೊತ್ತಡವನ್ನ ಬ್ಯಾಲೆನ್ಸ್ ಮಾಡಲಿದೆ.
ನಿಮಗೆ ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಇದ್ದರೂ ಪೂರ್ತಿ ರಾತ್ರಿ ನೆನೆಸಿ 2 ರಿಂದ ನಾಲ್ಕು ಒಣ ದ್ರಾಕ್ಷಿಯನ್ನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದರಿಂದ ಜೀರ್ಣಕ್ರಿಯ ತೊಂದರೆ ಸಂಪೂರ್ಣ ವಾಸಿಯಾಗದೇ ಇದ್ದರೂ ಸಹ ಜೀರ್ಣಶಕ್ತಿ ಹೆಚ್ಚಲಿದೆ.