ಬೆಳಗಾವಿ ಲೋಕಸಭೆ, ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಇಂದು ಮತದಾನ ನಡೆಯಲಿದೆ. ಚುನಾವಣಾ ಆಯೋಗ ನೀಡಿರುವ ಭಾವಚಿತ್ರವಿರುವ ಮತದಾರರ ಚೀಟಿಯನ್ನು ಚುನಾವಣೆ ವೇಳೆಯಲ್ಲಿ ಮತದಾರರ ಗುರುತಿಗೆ ಮುಖ್ಯ ದಾಖಲೆಯನ್ನಾಗಿ ಪರಿಗಣಿಸಲಾಗುತ್ತಿದೆ.
ಮತದಾನದ ವೇಳೆಯಲ್ಲಿ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಹಾಜರುಪಡಿಸಲು ಸಾಧ್ಯವಾಗಲೇ ಇದ್ದಲ್ಲಿ ಮತದಾರರು ತಮ್ಮ ಮತ ಚಲಾಯಿಸಲು ಚುನಾವಣಾ ಆಯೋಗ ಪರ್ಯಾಯವಾಗಿ 11 ಬಗೆಯ ದಾಖಲೆಗಳನ್ನು ನಿಗದಿಪಡಿಸಿದೆ.
ಈ 11 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯಿದ್ದಲ್ಲಿ, ಮತ ಚಲಾಯಿಸಬಹುದಾಗಿದೆ. ಮತದಾನಕ್ಕೆ ಆಧಾರ್ ಕಾರ್ಡ್, ಮನರೇಗಾ ಜಾಬ್ ಕಾರ್ಡ್, ಬ್ಯಾಂಕ್/ಅಂಚೆ ಕಚೇರಿ ನೀಡಿರುವ ಭಾವಚಿತ್ರವಿರುವ ಪಾಸ್ಬುಕ್, ಕಾರ್ಮಿಕ ಮಂತ್ರಾಲಯದ ಯೋಜನೆಯಡಿ ನೀಡಿರುವ ಆರೋಗ್ಯ ವಿಮೆ ಸ್ಮಾಟ್ ಕಾರ್ಡ, ಡ್ರೆöÊವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಆರ್ಜಿಐ ಮತ್ತು ಎನ್ಪಿಆರ್ನಿಂದ ನೀಡಿರುವ ಸ್ಮಾರ್ಟ್ ಕಾರ್ಡ್, ಇಂಡಿಯನ್ ಪಾಸ್ಪೋರ್ಟ್, ರಾಜ್ಯ/ಕೇಂದ್ರ ಹಾಗೂ ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಭಾವಚಿತ್ರವಿರುವ ಪಿಂಚಣಿ ದಾಖಲೆಗಳು, ಲೋಕಸಭೆ/ವಿಧಾನಸಭೆ/ವಿಧಾನ್ ಪರಿಷತ್ ಸದಸ್ಯರಿಗೆ ಅಧೀಕೃತವಾಗಿ ನೀಡಿರುವ ಗುರುತಿನ ಚೀಟಿಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ.