ಕೇರಳ ವೈದ್ಯಕೀಯ ವಿದ್ಯಾರ್ಥಿಗಳ ನೃತ್ಯ ವಿಡಿಯೋ ವೈರಲ್ ಆದ ಕೆಲವೇ ದಿನಗಳಲ್ಲಿ ಈ ವಿಷಯವನ್ನು ಕೋಮು ವಿಚಾರದ ಮೂಲಕ ಟ್ರೋಲಿಂಗ್‌ಗೆ ಗುರಿಪಡಿಸಿದ ಬಳಿಕ ಅದೇ ಕಾಲೇಜಿನ ವಿದ್ಯಾಥಿಗಳು ಮತ್ತೊಂದು ನೃತ್ಯ ವಿಡಿಯೋ ಮೂಲಕ ಪ್ರತ್ಯುತ್ತರ ಕೊಟ್ಟಿದ್ದಾರೆ.
’ಲವ್ ಜಿಹಾದ್’ ಆಪಾದನೆ ಈ ಡ್ಯಾನ್ಸ್ ಜೋಡಿಯ ವಿರುದ್ಧ ಕೇಳಿ ಬರಲು ಶುರುಮಾಡಿದ ಬಳಿಕ ತ್ರಿಶ್ಶೂರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಮತ್ತೊಂದು ವಿಡಿಯೋ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಅಕ್ರಮ ಸಂಬಂಧದಿಂದ ಅನಾಹುತ, ಮಾರಕಾಸ್ತ್ರದಿಂದ ಥಳಿಸಿ ಹತ್ಯೆ
ಈ ಬಾರಿ ವಿದ್ಯಾರ್ಥಿಗಳ ಸಮೂಹವೇ ಬೋನಿ ಎಂ ಹಾಡಿಗೆ ಸ್ಟೆಪ್ ಹಾಕಿದೆ. ಮೊದಲ ವಿಡಿಯೋದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಾದ ನವೀನ್ ಕೆ ರಜಾಕ್ ಹಾಗೂ ಜಾನಕಿ ಎಂ ಓಂಕುಮಾರ್ ಅವರ ಭರ್ಜರಿ ನೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಾಡಿನ ವಿಚಾರವಾಗಿ ಕಾಮೆಂಟ್ ಮಾಡಿದ್ದ ವಕೀಲರೊಬ್ಬರು ಕೋಮು ದೃಷ್ಟಿಕೋನದ ಕಾಮೆಂಟ್ ಒಂದನ್ನು ಮಾಡಿದ್ದರು.
https://www.facebook.com/watch/?v=489817285709051&t=1