ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಕೆ ಎಸ್ ಆರ್ ಟಿ ಸಿ, ಬಿಎಂಟಿಸಿ ಬಸ್ ಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇದರಿಂದಾಗಿ ವಿದ್ಯಾರ್ಥಿಗಳು, ಪ್ರಯಾಣಿಕರು ಪರದಾಡುತ್ತಿದ್ದಾರೆ. ಈ ನಡುವೆ ಬಿಎಂಟಿಸಿ ಬಸ್ ಸಂಚಾರ ಬಂದ್ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೊಬ್ಬರು 10 ಲಕ್ಷ ಪರಿಹಾರ ಕೇಳಿ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಬಿಎಂಟಿಸಿ ಎಂಡಿ ಶಿಖಾ ಅವರಿಗೆ ನೋಟೀಸ್ ಜಾರಿ ಮಾಡಿದ್ದಾಳೆ.
ಜೆ.ಎಸ್.ಎಸ್. ಅಕಾಡೆಮಿ ಆಫ್ ಟೆಕ್ನಿಕಲ್ ಕಾಲೇಜಿನ ವಿದ್ಯಾರ್ಥಿನಿ ಪಾವನಾ ಈ ನೋಟೀಸ್ ನೀಡಿದ್ದು, ಬಸ್ ಸಂಚಾರ ಬಂದ್ ಆಗಿದ್ದು, ನಾವು ಬಿಎಂಟಿಸಿ ಬಸ್ ಪಾಸ್ ಹೊಂದಿದ್ದರೂ ಪ್ರಯೋಜವಾಗುತ್ತಿಲ್ಲ. ಬಸ್ ಗಳಿಲ್ಲದೇ ಹೆಚ್ಚುವರಿ ಹಣ ಪಾವತಿಸಿ ಓಡಾಡುತ್ತಿದ್ದೇವೆ. ಪಾಸ್ ಹೊಂದಿದ್ದವರಿಗೂ ಬಸ್ ಸೌಲಭ್ಯ ಒದಗಿಸದಿರುವುದು ಸೇವಾ ನ್ಯೂನ್ಯತೆ ಹಾಗೂ ಅನುಚಿತ ವ್ಯಾಪಾರವಾಗಿದೆ. ಹೀಗಾಗಿ 10 ಲಕ್ಷ ಪರಿಹಾರ ನೀಡಬೇಕು ಎಂದು ನೋಟೀಸ್ ನಲ್ಲಿ ತಿಳಿಸಲಾಗಿದೆ.
ಪೆಟ್ರೋಲ್ ಎರಚಿ ಬೆದರಿಕೆ; ಮುಷ್ಕರ ನಿರತ ಕೆ.ಎಸ್.ಆರ್.ಟಿ.ಸಿ. ಚಾಲಕ ಸಸ್ಪೆಂಡ್
ವಕೀಲ ರಮೇಶ್ ನಾಯಕ್ ಮೀಲಕ ಪಾವನಾ ಲೀಗಲ್ ನೋಟೀಸ್ ಜಾರಿ ಮಾಡಿದ್ದಾಳೆ.