ನವದೆಹಲಿ: ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ಟ್ವಿಟರ್ ವಿಶ್ವದ ಹಲವು ದೇಶಗಳಲ್ಲಿ ಡೌನ್ ಆಗಿದೆ. ಅಮೆರಿಕದಲ್ಲಿ ಹೆಚ್ಚಿನ ಸಮಸ್ಯೆ ಕಂಡುಬಂದಿದೆ.
ಆಂಡ್ರಾಯ್ಡ್ ಮತ್ತು ಐಫೋನ್ ಅಪ್ಲಿಕೇಶನ್ ಗಳಲ್ಲಿ ಟ್ವಿಟರ್ ಡೌನ್ ಇದೆ. ಅಮೆರಿಕ, ಬ್ರಿಟನ್, ಚೀನಾ ಜೊತೆಗೆ ವಿಶ್ವದ ಇತರ ದೇಶಗಳಲ್ಲಿಯೂ ಬಳಕೆದಾರರಿಗೆ ತೊಂದರೆಯಾಗಿದೆ. ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಒಡೆತನದ ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಕಳೆದ ಎರಡು ವಾರಗಳಲ್ಲಿ ಡೌನ್ ಆಗಿ ಬಳಕೆದಾರರು ತೊಂದರೆ ಬಗ್ಗೆ ಹೇಳಿಕೊಂಡಿದ್ದರು. ಈಗ ಟ್ವಿಟರ್ ಡೌನ್ ಆಗಿ ಹೆಚ್ಚಿನ ಸಂಖ್ಯೆಯ ಬಳಕೆದಾರರಿಗೆ ತೊಂದರೆಯಾಗಿದೆ.
ಅಮೆರಿಕಾದ ಬೋಸ್ಟನ್, ನ್ಯೂಯಾರ್ಕ್, ವಾಷಿಂಗ್ಟನ್, ಅಟ್ಲಾಂಟಾ ಮೊದಲಾದ ಕಡೆ ಹೆಚ್ಚಿನ ತೊಂದರೆ ಆದ ಬಗ್ಗೆ ಬಳಕೆದಾರರು ದೂರಿದ್ದಾರೆ. ಸುಮಾರು 18 ಸಾವಿರ ಬಳಕೆದಾರರು # ಟ್ವಿಟ್ಟರ್ಡೌನ್’ ಹ್ಯಾಶ್ಟ್ಯಾಗ್ ಬಳಸಿ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ.