ಸಾಮಾಜಿಕ ಜಾಲತಾಣದ ಮೂಲಕ ಹಣ ಸಂಪಾದಿಸಲು ಬಯಸಿದರೆ ನಿಮಗೆ ಖುಷಿ ಸುದ್ದಿ ಇದೆ. ಮನೆಯಲ್ಲಿ ಕುಳಿತು ಗಳಿಸಲು ಇದು ಒಳ್ಳೆ ಅವಕಾಶ. ವಿಶ್ವದ ಅತಿದೊಡ್ಡ ಸಾಮಾಜಿಕ ಮಾಧ್ಯಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಗಳಿಕೆಗೆ ಅವಕಾಶ ನೀಡ್ತಿದೆ. ಇತ್ತೀಚೆಗೆ ಫೇಸ್ಬುಕ್ ಇಂಕ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಕಂಟೆಂಟ್ ಕ್ರಿಯೇಟರ್ ಗಳಿಗೆ ಸಣ್ಣ ವೀಡಿಯೊಗಳನ್ನು ಹಾಕಿ, ಜಾಹೀರಾತುಗಳ ಮೂಲಕ ಹಣ ಗಳಿಸಲು ಅನುಮತಿ ನೀಡಿದೆ. ಇದಲ್ಲದೆ ಜನರು ಯಾವ ರೀತಿ ಫೇಸ್ಬುಕ್ನಲ್ಲಿ ಸಂಪಾದಿಸಬಹುದು ಎಂದು ಫೇಸ್ಬುಕ್ ವಿವರಿಸಿದೆ.
ಫೇಸ್ಬುಕ್ನಲ್ಲಿ ಬಳಕೆದಾರರು ಒಂದು ನಿಮಿಷದವರೆಗೆ ವೀಡಿಯೊ ಹಾಕುವ ಮೂಲಕ ಹಣ ಗಳಿಸಬಹುದು. ಈ ಒಂದು ನಿಮಿಷದ ವೀಡಿಯೊದಲ್ಲಿ ಕನಿಷ್ಠ 30 ಸೆಕೆಂಡುಗಳ ಜಾಹೀರಾತಿರಬೇಕು. ಮೂರು ನಿಮಿಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯದ ವೀಡಿಯೊದಲ್ಲಿ ಕನಿಷ್ಠ 45 ಸೆಕೆಂಡುಗಳ ಜಾಹೀರಾತಿರಬೇಕು. ಈ ಮೊದಲು ಕೇವಲ ಮೂರು ನಿಮಿಷ ಅಥವಾ ಅದಕ್ಕಿಂತ ಹೆಚ್ಚಿನ ವೀಡಿಯೊಗಳಲ್ಲಿ ಮಾತ್ರ ಜಾಹೀರಾತಿಗೆ ಅವಕಾಶವಿತ್ತು. ಒಂದು ನಿಮಿಷದ ವಿಡಿಯೋದಲ್ಲಿ ಜಾಹೀರಾತಿಗೆ ಅವಕಾಶವಿರಲಿಲ್ಲ.
ಟಿಕೆಟ್ ದರ ಹೆಚ್ಚಳ ಬಿಸಿ: ಕನಿಷ್ಠ ದರ ಶೇಕಡ 5 ರಷ್ಟು ಹೆಚ್ಚಳ ಮಾಡಿ ವಿಮಾನ ಪ್ರಯಾಣಿಕರಿಗೆ ಸರ್ಕಾರದಿಂದ ಬಿಗ್ ಶಾಕ್
ಒಂದು ವಿಡಿಯೋ 60 ದಿನಗಳಲ್ಲಿ 6 ಲಕ್ಷ ವೀಕ್ಷಣೆಯನ್ನು ಹೊಂದಿರಬೇಕು. ಲೈವ್ ವಿಡಿಯೋವನ್ನು 60,000 ನಿಮಿಷ ವೀಕ್ಷಿಸುವುದು ಅನಿವಾರ್ಯ.
ಇನ್ನು ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ನ ಸಕ್ರಿಯ ಬಳಕೆದಾರರಾಗಿದ್ದರೆ ಒಳ್ಳೆಯ ಸುದ್ದಿ. ಟ್ವಿಟರ್ ಬಳಕೆದಾರರಿಗೆ ಗಳಿಕೆಗೆ ಅವಕಾಶ ನೀಡಿದೆ. ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ಬಳಸುತ್ತಿದ್ದು, ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದರೆ ಹಣ ಸಂಪಾದಿಸುವ ಅವಕಾಶ ಇರುತ್ತದೆ.
ದೊಡ್ಡ ಬ್ರಾಂಡ್ ಆಗಿ ಹೊರಹೊಮ್ಮುತ್ತಿರುವ ಇನ್ಸ್ಟಾಗ್ರಾಮ್ ಲಕ್ಷಾಂತರ ರೂಪಾಯಿ ಗಳಿಕೆಗೆ ಅವಕಾಶ ನೀಡ್ತಿದೆ. ಅನೇಕ ಸೆಲೆಬ್ರಿಟಿಗಳು ಬ್ರಾಂಡ್ ಅಸೋಸಿಯೇಷನ್ಗಳ ಮೂಲಕ ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಹಣ ಗಳಿಸುತ್ತಿದ್ದಾರೆ. ಆ್ಯಪ್ ಮೂಲಕ ನಿಮ್ಮ ಪ್ರತಿಭೆ ಬಳಸಿ ಕೂಡ ಹಣ ಸಂಪಾದಿಸಬಹುದು. ಹೆಚ್ಚು ವೀಕ್ಷಣೆ ಪಡೆಯುತ್ತಿರುವ ವಿಡಿಯೋ ಬ್ಲಾಗರ್ ಗಳಿಗೆ ಇನ್ಸ್ಟ್ರಾಗ್ರಾಮ್ ಕೆಲ ಉಡುಗೊರೆಗಳನ್ನು ಕೂಡ ನೀಡುತ್ತದೆ.