ಸರ್ಕಾರವು ದೇಶದಲ್ಲಿರುವ ಪ್ರತಿಯೊಬ್ಬರ ಮನೆಯಲ್ಲೂ ದಿನಸಿ ಸಾಮಗ್ರಿಗೆ ಸಮಸ್ಯೆ ಉಂಟಾಗಬಾರದು ಎಂಬ ಕಾರಣಕ್ಕೆ ನ್ಯಾಯ ಬೆಲೆ ಅಂಗಡಿಯನ್ನ ಸ್ಥಾಪಿಸಿದೆ. ಕಳೆದ ವರ್ಷದಿಂದ ದೇಶದಲ್ಲಿ ‘ಒಂದು ದೇಶ ಒಂದು ಕಾರ್ಡ್ʼ ವ್ಯವಸ್ಥೆಯನ್ನೂ ಜಾರಿ ಮಾಡಲಾಗಿದೆ. ಇದರಿಂದಾಗಿ ಭಾರತದ ಪ್ರಜೆ ದೇಶದ ಯಾವುದೇ ಮೂಲೆಯಲ್ಲಿ ಪಡಿತರ ಚೀಟಿಯನ್ನ ಬಳಕೆ ಮಾಡಬಹುದಾಗಿದೆ.
ಆದರೆ ನಿಮ್ಮ ಬಳಿ ಇಲ್ಲಿಯವರೆಗೂ ರೇಶನ್ ಕಾರ್ಡ್ ಇಲ್ಲ ಎಂದಾದರೆ ಹೆದರಿಕೊಳ್ಳುವ ಅವಶ್ಯಕತೆ ಬೇಡ. ನೀವು ಮನೆಯಲ್ಲೇ ಕೂತು ನಿಮ್ಮ ಸ್ಮಾರ್ಟ್ ಫೋನ್ನ ಸಹಾಯದಿಂದ ಆನ್ಲೈನ್ ರೇಶನ್ ಕಾರ್ಡ್ನ್ನು ಆರ್ಡರ್ ಮಾಡಬಹುದಾಗಿದೆ. ಇದಕ್ಕೆಂದೇ ದೇಶದ ಪ್ರತಿಯೊಂದು ರಾಜ್ಯವೂ ಪ್ರತ್ಯೇಕ ರೇಷನ್ ಕಾರ್ಡ್ ವೆಬ್ಸೈಟ್ಗಳನ್ನ ನಿರ್ಮಿಸಿದೆ.
ಭಾರತದ ಪ್ರತಿಯೊಬ್ಬ ನಾಗರಿಕನೂ ಪಡಿತರ ಚೀಟಿಯನ್ನ ಹೊಂದಲು ಅರ್ಹನಾಗಿದ್ದಾನೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನೂ ರೇಶನ್ ಕಾರ್ಡ್ನಲ್ಲಿ ಸೇರಿಸಿಕೊಳ್ಳಲಾಗುತ್ತೆ. 18 ವರ್ಷ ತುಂಬಿದ ಬಳಿಕ ಸೂಕ್ತ ದಾಖಲೆಗಳನ್ನ ನೀಡಿ ಪ್ರತ್ಯೇಕ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ರೇಶನ್ ಕಾರ್ಡ್ ಮಾಡಲು ನೀವು ಮೊದಲು ನಿಮ್ಮ ರಾಜ್ಯದ ಅಧಿಕೃತ ವೆಬ್ಸೈಟ್ ಖಾತೆಗೆ ಲಾಗಿನ್ ಆಗಿರಿ.
ಈ ವೆಬ್ಸೈಟ್ನಲ್ಲಿ Apply online for ration card ಲಿಂಕ್ ಮೇಲೆ ಕ್ಲಿಕ್ ಮಾಡಿ .
ರೇಶನ್ ಕಾರ್ಡ್ನ್ನು ಪಡೆಯಲು ನಿಮ್ಮ ಐಡಿ ಪ್ರೂಫ್ಗಳ ರೂಪದಲ್ಲಿ ವೋಟರ್ ಐಡಿ, ಪಾಸ್ಪೋರ್ಟ್, ಆಧಾರ್ ಕಾರ್ಡ್, ವಾಹನ ಪರವಾನಿಗೆ ಸೇರಿದಂತೆ ವಿವಿಧ ದಾಖಲೆಗಳನ್ನ ಸಲ್ಲಿಸಬಹುದಾಗಿದೆ.
ರೇಶನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು 05 ರೂಪಾಯಿಗಳಿಂದ 45 ರೂಪಾಯಿಗಳವರೆಗೆ ಶುಲ್ಕ ಇದೆ. ಅರ್ಜಿ ಶುಲ್ಕವನ್ನ ಭರಿಸಿದ ಬಳಿಕ ಅಪ್ಲಿಕೇಶನ್ನ್ನು ಸಬ್ಮಿಟ್ ಮಾಡಿ.
ಫೀಲ್ಡ್ ವೆರಿಫಿಕೇಶನ್ ಮಾಡಿದ ಬಳಿಕ ನಿಮ್ಮ ದಾಖಲೆಗಳು ಸೂಕ್ತವಾಗಿದ್ದರೆ ನಿಮಗೆ ಹೊಸ ರೇಶನ್ ಕಾರ್ಡ್ ಸಿಗಲಿದೆ.