alex Certify ಶಾಖಾಹಾರಿ ಕುಟುಂಬಕ್ಕೆ ಮಾಂಸಾಹಾರಿ ಪಿಜ್ಜಾ ನೀಡಿ ಪೇಚಿಗೆ ಸಿಲುಕಿದೆ ಪಿಜ್ಜಾ ಔಟ್​ಲೆಟ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಖಾಹಾರಿ ಕುಟುಂಬಕ್ಕೆ ಮಾಂಸಾಹಾರಿ ಪಿಜ್ಜಾ ನೀಡಿ ಪೇಚಿಗೆ ಸಿಲುಕಿದೆ ಪಿಜ್ಜಾ ಔಟ್​ಲೆಟ್..​..!

ಶುದ್ಧ ಸಸ್ಯಾಹಾರಿ ಕುಟುಂಬಕ್ಕೆ ಮಾಂಸಾಹಾರಿ ಪಿಜ್ಜಾವನ್ನ ಕಳುಹಿಸಿದ ತಪ್ಪಿಗೆ ಪಿಜ್ಜಾ ತಯಾರಕ ಕಂಪನಿಯೊಂದು ಭಾರೀ ಸಂಕಷ್ಟಕ್ಕೆ ಸಿಲುಕಿದೆ. ಉತ್ತರ ಪ್ರದೇಶದ ಘಾಜಿಯಾಬಾದ್​ ನಿವಾಸಿಯಾಗಿರುವ ಮಹಿಳೆ 1 ಕೋಟಿ ರೂಪಾಯಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ.

ಗ್ರಾಹಕ ಸೇವಾ ಕೋರ್ಟ್​ನ್ನು ಸಂಪರ್ಕಿಸಿದ ದೀಪಾಲಿ ತ್ಯಾಗಿ ಪಿಜ್ಜಾ ಕಂಪನಿಯ ಅಚಾತುರ್ಯದಿಂದ ನಮ್ಮ ಧರ್ಮಕ್ಕೆ ಧಕ್ಕೆ ಉಂಟಾಗಿದೆ ಎಂದು ದೂರನ್ನ ನೀಡಿದ್ದಾರೆ.
ಕೋರ್ಟ್​ಗೆ ಸಲ್ಲಿಸಲಾದ ಅರ್ಜಿಯಲ್ಲಿ ಮಹಿಳೆ ತಾವು ಶುದ್ಧ ಶಾಖಾಹಾರಿಯಾಗಿದ್ದು ಪಿಜ್ಜಾ ಸಂಸ್ಥೆ ನನ್ನ ಹಾಗೂ ನನ್ನ ಕುಟುಂಬಸ್ಥರ ಧರ್ಮದ ಆಚರಣೆಗೆ ಭಂಗ ತಂದಿದೆ ಎಂದು ಆರೋಪಿಸಿದ್ದಾರೆ.

ಮಹಿಳೆ 2019ರ ಮಾರ್ಚ್​ 21ರಂದು ಪಿಜ್ಜಾ ಆರ್ಡರ್​ ಮಾಡಿದ್ದರು. ಹೋಳಿ ಹಬ್ಬದ ದಿನ ಮನೆಯಲ್ಲಿ ಎಲ್ಲರೂ ಹಸಿದಿದ್ದ ಕಾರಣ ಪಿಜ್ಜಾ ಆರ್ಡರ್​ ಮಾಡಲಾಗಿತ್ತು.
ಪಿಜ್ಜಾ ಬರುವುದು ತುಂಬಾನೇ ತಡವಾದರೂ ಸಹ ಮಹಿಳೆ ಯಾವುದೇ ದೂರನ್ನ ನೀಡಿರಲಿಲ್ಲ. ಆದರೆ ಪಿಜ್ಜಾವನ್ನ ತಿನ್ನುತ್ತಿದ್ದಂತೆಯೇ ಅದರಲ್ಲಿ ಮಾಂಸ ಇರುವ ವಿಚಾರ ತಿಳಿದಿದೆ. ಮಶ್ರೂಮ್​ ಪಿಜ್ಜಾದ ಬದಲು ಅವರು ನಮಗೆ ಮಾಂಸಾಹಾರಿ ಪಿಜ್ಜಾ ನೀಡಿದ್ದರು ಎಂದು ಹೇಳಿದ್ದಾರೆ.

ಈ ಘಟನೆ ನಡೆದ ನಾಲ್ಕು ದಿನದ ಬಳಿಕ ಪಿಜ್ಜಾ ಔಟ್​ಲೆಟ್​ನ ಮ್ಯಾನೇಜರ್​ ಈಕೆಯ ಕುಟುಂಬಕ್ಕೆ ಉಚಿತವಾಗಿ ಪಿಜ್ಜಾ ಡೆಲಿವರಿ ನೀಡಿದ್ದರಂತೆ. ಆದರೆ ಈ ಆಫರ್​ನ್ನು ದೀಪಾಲಿ ತಿರಸ್ಕರಿಸಿದ್ದಾರೆ. ಈ ಘಟನೆಯಿಂದಾಗಿ ನಮ್ಮ ಸಂಸ್ಕೃತಿಗೆ ಧಕ್ಕೆ ಉಂಟಾಗಿದೆ. ನಾವು ಮಾನಸಿಕವಾಗಿ ನೊಂದಿದ್ದೇವೆ. ಹೀಗಾಗಿ ನಾನು ಕಾನೂನು ಬದ್ಧವಾಗಿ ಹೋರಾಡುತ್ತೇನೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...