ಕೊರೊನಾ ವೈರಸ್ ಸಂಕಷ್ಟದ ಈ ಸಮಯದಲ್ಲಿ ಭಾರತ ವಿಶ್ವದ ಅನೇಕ ರಾಷ್ಟ್ರಗಳಿಗೆ ಉಡುಗೊರೆಯ ರೂಪದಲ್ಲಿ ಲಸಿಕೆಗಳನ್ನ ನೀಡುವ ಮೂಲಕ ಸಹಾಯ ಹಸ್ತ ಚಾಚಿದೆ. ಹೀಗಾಗಿ ವಿಶ್ವಾದ್ಯಂತ ಭಾರತದ ಈ ಗುಣಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗ್ತಿದೆ.
ಭಾರತ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯ ಕೋವಿಶೀಲ್ಡ್ ಲಸಿಕೆಯ 5 ಲಕ್ಷ ಡೋಸ್ಗಳನ್ನ ಕೆನಡಾಗೆ ಕಳುಹಿಸಿಕೊಟ್ಟಿದೆ. ಭಾರತದ ಈ ಸಹಾಯಕ್ಕೆ ಕೆನಡಾ ಹೃದಯಪೂರ್ವಕ ಧನ್ಯವಾದವನ್ನ ಅರ್ಪಿಸಿದೆ. ಭಾರತಕ್ಕೆ ವಿಶೇಷ ರೂಪದಲ್ಲಿ ಧನ್ಯವಾದ ಅರ್ಪಿಸಿರುವ ಕೆನಡಾದ ಗ್ರೇಟರ್ ಟೊರೆಂಟೋದಲ್ಲಿ ಪ್ರಧಾನಿ ಮೋದಿಯ ಕಟೌಟ್ನ್ನು ಅಳವಡಿಸಲಾಗಿದೆ. ಈ ಕಟೌಟ್ನಲ್ಲಿ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಲಾಗಿದೆ.
ಪ್ರಧಾನಿ ಇಮ್ರಾನ್ ಹೇಳಿಕೆಗೆ ಮ್ಯೂಸಿಕಲ್ ಟಚ್ ಕೊಟ್ಟ ಪಾಕ್ ಗಾಯಕ
ಕೆನಡಾದ ಟೊರೊಂಟೋದಲ್ಲಿ ಅಳವಡಿಸಲಾಗಿರುವ ಈ ಬಿಲ್ ಬೋರ್ಡ್ನಲ್ಲಿ – ಕೆನಡಾಗೆ ಲಸಿಕೆಗಳನ್ನ ಕಳುಹಿಸಿಕೊಟ್ಟಿದ್ದಕ್ಕೆ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದಗಳು. ಕೆನಡಾ ಹಾಗೂ ಭಾರತದ ಈ ಸ್ನೇಹ ಸಂಬಂಧ ಇದೇ ರೀತಿ ಮುಂದುವರಿಯಲಿ ಎಂದು ಬರೆಯಲಾಗಿದೆ. ‘
ಭಾರತ ಇನ್ನೇನು ಕೆಲವೇ ದಿನಗಳಲ್ಲಿ ಕೆನಡಾಗೆ 20 ಲಕ್ಷ ಡೋಸ್ ಲಸಿಕೆಗಳನ್ನ ಕಳುಹಿಸಿಕೊಡಲಿದೆ.