10ನೇ ತರಗತಿ ಪಾಸ್ ಆದವರಿಗೆ ಸುವರ್ಣಾವಕಾಶವಿದೆ. ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಕೆಲಸ ಮಾಡಲು ಅವಕಾಶ ಸಿಗ್ತಿದೆ. ಸರ್ಕಾರದ ವಿವಿಧ ಸಚಿವಾಲಯಗಳಿಗೆ ಎಂಟಿಎಸ್ ಹುದ್ದೆಗಳ ನೇಮಕಾತಿ ನಡೆಯಲಿದೆ.
ಈ ನೇಮಕಾತಿಗಾಗಿ ಎಸ್‌ಎಸ್‌ಸಿ ಅಧಿಸೂಚನೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಎಸ್‌ಎಸ್‌ಸಿ ಅಧಿಕೃತ ವೆಬ್‌ಸೈಟ್ ssc.nic.in ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 21.
ಆನ್‌ಲೈನ್ ಶುಲ್ಕ ಪಾವತಿಗೆ ಮಾರ್ಚ್ 23 ಕೊನೆಯ ದಿನಾಂಕವಾಗಿದೆ. ಆಫ್‌ಲೈನ್ ಚಲನ್‌ಗೆ ಅಂತಿಮ ದಿನಾಂಕ ಮಾರ್ಚ್ 25 ಆಗಿದ್ದು, ಚಲನ್ ಮೂಲಕ ಪಾವತಿಸಲು ಮಾರ್ಚ್ 29 ಕೊನೆಯ ದಿನಾಂಕವಾಗಿದೆ. ಮೊದಲ ಪರೀಕ್ಷೆ ಜುಲೈ 1ರಿಂದ 20ರೊಳಗೆ ನಡೆಯಲಿದೆ. ಎರಡನೇ ಪರೀಕ್ಷೆ ನವೆಂಬರ್ 21ರಂದು ನಡೆಯಲಿದೆ. ಮೊದಲ ಪರೀಕ್ಷೆ ಪಾಸ್ ಆದವರಿಗೆ ಎರಡನೇ ಶ್ರೇಣಿ ಪರೀಕ್ಷೆ ನಡೆಯಲಿದೆ. ಅಲ್ಲಿ ಪಾಸ್ ಆದ ಅಭ್ಯರ್ಥಿಗಳ ದಾಖಲೆ ಪರೀಕ್ಷೆ ನಂತ್ರ ನೇಮಕ ನಡೆಯಲಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿ ಮಾನ್ಯತೆ ಪಡೆದ ಶಿಕ್ಷಣ ಇಲಾಖೆಯಲ್ಲಿ 10ನೇ ತರಗತಿ ಉತ್ತೀರ್ಣರಾಗಿರಬೇಕು. 18ರಿಂದ 25 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 100 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಮಹಿಳೆಯರು, ಎಸ್‌ಸಿ, ಎಸ್‌ಟಿ, ಪಿಡಬ್ಲ್ಯುಡಿ ಮತ್ತು ಇಎಸ್‌ಎಂ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.