ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಹೊಸದಾಗಿ ನೋಂದಾಯಿಸಿಕೊಂಡವರಿಗೆ ವಾರ್ಷಿಕ 6 ಸಾವಿರ ರೂಪಾಯಿ ನೀಡಲಾಗುತ್ತದೆ.
ಕೇಂದ್ರ ಸರ್ಕಾರದ ಶೇಕಡ 100 ರಷ್ಟು ಧನ ಸಹಾಯ ಹೊಂದಿರುವ ಈ ಯೋಜನೆಯಡಿಯಲ್ಲಿ ರೈತರಿಗೆ 6 ಸಾವಿರ ರೂ. ನೆರವು ನೀಡಲಾಗುತ್ತದೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವಾರ್ಷಿಕ 6 ಸಾವಿರ ರೂಪಾಯಿಗಳನ್ನು ಮೂರು ಕಂತುಗಳಲ್ಲಿ ವರ್ಗಾವಣೆ ಮಾಡಲಾಗುತ್ತದೆ.
ಇನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೋಂದಾಯಿಸಿಕೊಳ್ಳಲು ಮಾಹಿತಿ ಇಲ್ಲಿದೆ. ಈ ತಿಂಗಳ ಅಂತ್ಯದೊಳಗೆ ನೋಂದಾಯಿಸಿಕೊಂಡರೆ 4000 ರೂಪಾಯಿಯನ್ನು ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಲಾಗಿದೆ.
ಮಾರ್ಚ್ 31 ರೊಳಗೆ ಹೊಸದಾಗಿ ನೋಂದಾಯಿಸಿಕೊಂಡ ರೈತರ ಖಾತೆಗೆ ಈ ತಿಂಗಳು 2000 ರೂ., ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಎರಡನೇ ಕಂತಿನ 2000 ರೂಪಾಯಿ ಜಮಾ ಮಾಡಲಾಗುವುದು.
3 ಕಂತುಗಳಲ್ಲಿ ಖಾತೆಗೆ ಹಣ ಜಮಾ:
ಮೊದಲ ಕಂತು ಏಪ್ರಿಲ್ 1 ರಿಂದ ಜುಲೈ 31 ರವರೆಗೆ
ಎರಡನೇ ಕಂತು ಆಗಸ್ಟ್ 1 ರಿಂದ ನವೆಂಬರ್ 30 ರ ವರೆಗೆ
ಮೂರನೇ ಕಂತನ್ನು ಡಿಸೆಂಬರ್ 1 ರಿಂದ ಮಾರ್ಚ್ 31ರವರೆಗೆ ಜಮಾ ಮಾಡಲಾಗುತ್ತದೆ
ಯೋಜನೆಗೆ ನೋಂದಾಯಿಸಲು ಮಾಹಿತಿ:
ಹೊಸದಾಗಿ ಯೋಜನೆಗೆ ನೊಂದಾಯಿಸುವ ರೈತರು ಪಿಎಂ ಕಿಸಾನ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.
ರೈತರ ಕಾರ್ನರ್ ಗೆ ಹೋಗಿ ಹೊಸ ರೈತರ ನೋಂದಣಿ ಕ್ಲಿಕ್ ಮಾಡಿ
ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ
ಕ್ಯಾಪ್ಚಾ ಕೋಡ್ ನಮೂದಿಸಿ
ಮುಂದೆ ಹೋಗಲು ನಿಮ್ಮ ರಾಜ್ಯ ಆಯ್ಕೆ ಮಾಡಿ
ನಿಮ್ಮ ವೈಯಕ್ತಿಕ ಮಾಹಿತಿಯೊಂದಿಗೆ ಫಾರ್ಮ್ ಭರ್ತಿ ಮಾಡಿ
ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ತಿಳಿಸಿ, ಸಬ್ಮಿಟ್ ಮಾಡಿ
ಯೋಜನೆಗೆ ನೊಂದಾಯಿಸಲು ಅಗತ್ಯವಾದ ದಾಖಲೆಗಳು:
ಆಧಾರ್ ಕಾರ್ಡ್
ನಾಗರಿಕತ್ವ ಪ್ರಮಾಣಪತ್ರ
ಜಮೀನು ಮಾಲೀಕತ್ವದ ದಾಖಲೆ
ಬ್ಯಾಂಕ್ ದಾಖಲೆ ವಿವರ
ಸಹಾಯವಾಣಿ:
ಅರ್ಜಿಯ ಸ್ಥಿತಿಯನ್ನು ತಿಳಿಯಲು, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಹೊಸ ಸಹಾಯವಾಣಿ ಸಂಖ್ಯೆ 011-24300606 ಸಂಪರ್ಕಿಸಬಹುದು.