ಕಾಂಗ್ರೆಸ್ ಹಾಗೂ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ತಮಿಳುನಾಡು ರಾಜಕೀಯದ ಬಹುತೇಕ ಪಕ್ಷಗಳ ನಾಯಕರು ಅನೇಕ ಹಗರಣಗಳಲ್ಲಿ ಸಿಲುಕಿ ಹೆಸರು ಮಾಡಿದ್ದಾರೆ ಎಂದು ಅಣಕವಾಡಿದ್ದಾರೆ.
ಪುದುಚೆರಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, “2ಜಿ ಎಂದರೆ ಮಾರನ್ ಕುಟುಂಬದ ಎರಡು ತಲೆಮಾರುಗಳು ಎಂದರ್ಥ, 3ಜಿ ಎಂದರೆ ಕರುಣಾನಿಧಿ ಕುಟುಂಬದ ಮೂರು ತಲೆಮಾರುಗಳು ಎಂದರ್ಥ ಹಾಗೂ 4ಜಿ ಗಾಂಧಿ ಕುಟುಂಬದ ನಾಲ್ಕು ತಲೆಮಾರುಗಳು ಎಂದರ್ಥ” ಎಂದು 2ಜಿ ಹಗರಣದಲ್ಲಿ ಸಿಲುಕಿದ್ದ ಕಾಂಗ್ರೆಸ್ ಹಾಗೂ ಡಿಎಂಕೆ ಪಕ್ಷದ ನಾಯಕರನ್ನು ಅಣಕ ಮಾಡಿದ್ದಾರೆ.
ನಾನು ಕಾಂಗ್ರೆಸ್ ಪಕ್ಷದಲ್ಲಿ ಉಳಿವುದನ್ನು ಕಾಲವೇ ನಿರ್ಧರಿಸಲಿದೆ: ಸಿ.ಎಂ. ಇಬ್ರಾಹಿಂ
“ಸ್ಟಾಲಿನ್ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದನ್ನು ನೋಡಿದಾಗ ನನಗೆ ನಗು ಬರುತ್ತೆ. 2ಜಿ ಹಗರಣ ಮಾಡಿದ್ದು ಯಾರು..? 12 ಲಕ್ಷ ಕೋಟಿ ರೂ. ಮೌಲ್ಯದ ಹಗರಣದಲ್ಲಿ ಕಾಂಗ್ರೆಸ್ ಭಾಗಿಯಾಗಿತ್ತು, ಆ ವೇಳೆ ಡಿಎಂಕೆ ಅದರ ಪಾಲುದಾರನಾಗಿತ್ತು” ಎಂದು ಅಮಿತ್ ಶಾ ಲೇವಡಿ ಮಾಡಿದ್ದಾರೆ.