ಹಸೆಮಣೆ ಏರಿದ ಮರುಕ್ಷಣದಲ್ಲೇ ಉತ್ತರ ಪ್ರದೇಶದ ಹೊಸ ಜೋಡಿಯೊಂದು ಪುಟಾಣಿ ಬಾಲಕಿಯೊಬ್ಬಳ ಜೀವ ಉಳಿಸಲು ರಕ್ತ ದಾನ ಮಾಡುವ ಮೂಲಕ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಘಟನೆಯ ವಿವರಗಳನ್ನು ಉ.ಪ್ರ. ಪೊಲೀಸ್ ಪೇದೆ ಆಶಿಶ್ ಮಿಶ್ರಾ ಶೇರ್ ಮಾಡಿಕೊಂಡಿದ್ದಾರೆ.
’ಪೊಲೀಸ್ ಮಿತ್ರಾ’ ಅಭಿಯಾನದ ಮೂಲಕ ತುರ್ತಾಗಿ ರಕ್ತ ಬೇಕಾದ ಮಂದಿಯ ನೆರವಿಗೆ ನಿಂತಿರುವ ಮಿಶ್ರಾ, ಮದುಮಕ್ಕಳ ಧಿರಿಸಿನಲ್ಲೇ ರಕ್ತದಾನ ಮಾಡುತ್ತಿರುವ ನವ ವಧುವರರ ಚಿತ್ರವನ್ನು ಶೇರ್ ಮಾಡಿಕೊಂಡಿದ್ದಾರೆ.
ಲಾಟರಿ ಕಾರ್ಡ್ ಬಳಸಿ ಪತಿಗೆ ಸರ್ಪ್ರೈಸ್ ನೀಡಿದ ಪತ್ನಿ
“ನನ್ನ ಭಾರತ ಮಹಾನ್” ಎಂದು ಈ ಪೇದೆ ಹಿಂದಿಯಲ್ಲಿ ಬರೆದಿದ್ದಾರೆ. ರಕ್ತದ ತುರ್ತು ಅಗತ್ಯದಲ್ಲಿ ಇದ್ದ ಪುಟಾಣಿ ಬಾಲಕಿಗೆ, ಆಕೆ ಇನ್ಯಾರದ್ದೋ ಮಗಳು ಎಂಬ ಕಾರಣಕ್ಕೆ ನೆರವಿಗೆ ಬರಲು ಯಾರೂ ಸಹ ಮುಂದಾಗದೇ ಇದ್ದಾಗ ಮದುಮಕ್ಕಳು ಮುಂದೆ ಬಂದಿದ್ದಾರೆ ಎಂದು ಹೇಳಿದ್ದಾರೆ ಮಿಶ್ರಾ.