alex Certify Good News: ಪೆಟ್ರೋಲ್‌ – ಡಿಸೇಲ್‌ ದರ ದುಬಾರಿಯಾಗಿದ್ದರ ಮಧ್ಯೆಯೂ ಈ ರಾಜ್ಯಗಳ ಜನತೆಗೆ ‌ʼಬಿಗ್ ರಿಲೀಫ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Good News: ಪೆಟ್ರೋಲ್‌ – ಡಿಸೇಲ್‌ ದರ ದುಬಾರಿಯಾಗಿದ್ದರ ಮಧ್ಯೆಯೂ ಈ ರಾಜ್ಯಗಳ ಜನತೆಗೆ ‌ʼಬಿಗ್ ರಿಲೀಫ್ʼ

ದೇಶದಲ್ಲಿ ಏರುತ್ತಿರುವ ಪೆಟ್ರೋಲ್​   ಹಾಗೂ ಡೀಸೆಲ್​ ಬೆಲೆ ಶ್ರೀಸಾಮಾನ್ಯನ ಜೇಬಿಗೆ ಕತ್ತರಿ ಹಾಕುತ್ತಲೇ ಇದೆ. ಕೆಲವು ರಾಜ್ಯಗಳಲ್ಲಂತೂ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ 100ರ ಗಡಿ ದಾಟಿದೆ. ತೈಲೋತ್ಪನ್ನಗಳ ಬೆಲೆ ಏರಿಕೆ ಖಂಡಿಸಿ ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನ ದೂಷಿಸುತ್ತಲೇ ಇದೆ.

ದೇಶದ ನಾಲ್ಕು ರಾಜ್ಯಗಳಲ್ಲಿ ಟ್ಯಾಕ್ಸ್​​ ಕಡಿತ ಮಾಡುವ ಮೂಲಕ ಗ್ರಾಹಕರಿಗೆ ಕೊಂಚ ನಿರಾಳ ಎನಿಸುವಂತೆ ಮಾಡಿದೆ. ಇದರಲ್ಲಿ ಕೆಲ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಹೀಗಾಗಿ ಜನರ ವಿಶ್ವಾಸವನ್ನ ಗಳಿಸಲಿಕ್ಕೋಸ್ಕರ ಈ ಕ್ರಮ ಕೈಗೊಳ್ಳಲಾಗಿದೆ.

ಪಶ್ಚಿಮ ಬಂಗಾಳ, ರಾಜಸ್ಥಾನ , ಆಸ್ಸಾಂ ಹಾಗೂ ಮೇಘಾಲಯದಲ್ಲಿ ಪೆಟ್ರೋಲ್​ ದರದಲ್ಲಿ ಇಳಿಕೆ ಮಾಡಲಾಗಿದೆ. ಎಲ್ಲಕ್ಕಿಂತ ಮೊದಲು ರಾಜಸ್ಥಾನದಲ್ಲಿ ಜನವರಿ 29ರಂದು ಪೆಟ್ರೋಲ್​ – ಡೀಸೆಲ್​​ ಮೇಲೆ ಹಾಕಲಾಗುವ 38 ಪ್ರತಿಶತ ವ್ಯಾಟ್​ನ್ನು ಕಡಿತಗೊಳಿಸಿ 36 ಪ್ರತಿಶತಕ್ಕೆ ಇಳಿಕೆ ಮಾಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಪೆಟ್ರೋಲ್​ ಹಾಗೂ ಡೀಸೆಲ್​ಗಳ ಮೇಲೆ ಹಾಕಲಾಗುವ ವ್ಯಾಟ್​ ಮೇಲೆ ಪ್ರತಿ ಲೀಟರ್​ಗೆ ಒಂದು ರೂಪಾಯಿ ಕಡಿತ ಮಾಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್​​ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಫೆಬ್ರವರಿ 12ರಂದು ಆಸ್ಸಾಂ ರಾಜ್ಯ ಸರ್ಕಾರ ಕೂಡ ಕಳೆದ ವರ್ಷ ಕೊರೊನಾ ಸಂಕಷ್ಟದಿಂದ ಜನರನ್ನ ಪಾರು ಮಾಡುವ ಸಲುವಾಗಿ 5 ರೂಪಾಯಿ ಎಡಿಷನಲ್​ ಟ್ಯಾಕ್ಸ್​​ನ್ನು ಕಡಿತಗೊಳಿಸಲಾಗಿದೆ. ಆಸ್ಸಾಂನಲ್ಲೂ ಚುನಾವಣೆ ಸಮೀಪಿಸುತ್ತಿದೆ.

ಇನ್ನು ಮೇಘಾಲಯದ ವಿಚಾರಕ್ಕೆ ಬರೋದಾದ್ರೆ ಇಲ್ಲಿನ ರಾಜ್ಯ ಸರ್ಕಾರ ಪ್ರತಿ ಲೀಟರ್​ ಪೆಟ್ರೋಲ್​ಗೆ 7.40 ಪ್ರತಿಶತ ಹಾಗೂ ಡೀಸೆಲ್​ 7.10 ಪ್ರತಿಶತ ಹಣವನ್ನ ಇಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೂ ಮೊದಲು ಪ್ರತಿ ಲೀಟರ್​ಗೆ 2 ರೂಪಾಯಿ ಕಡಿತಗೊಳಿಸಲಾಗಿತ್ತು. ಇದರ ಬಳಿಕ ಪೆಟ್ರೋಲ್​ ಮೇಲೆ ಹಾಕಲಾಗುವ 31.62 ಪ್ರತಿಶತ ವ್ಯಾಟ್​​ ಕಡಿತಗೊಳಿಸಿ 20 ಪ್ರತಿಶತಕ್ಕೆ ಹಾಗೂ ಡೀಸೆಲ್​​ನ 22.95 ಪ್ರತಿಶತ ವ್ಯಾಟ್​​ನ್ನು 12 ಪ್ರತಿಶತಕ್ಕೆ ಇಳಿಕೆ ಮಾಡಲಾಗಿದೆ.

ಪೆಟ್ರೋಲ್​ – ಡೀಸೆಲ್​ ದರದಲ್ಲಿ ಇಂದು ಅಂತಹ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಇದಕ್ಕೂ ಮೊದಲು ನಿರಂತರ 12 ದಿನಗಳ ಕಾಲ ತೈಲೋತ್ಪನ್ನಗಳ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿತ್ತು.

ದೆಹಲಿಯಲ್ಲಿ ಪೆಟ್ರೋಲ್​ ಬೆಲೆ 90.58 ರೂಪಾಯಿ ಹಾಗೂ ಡಿಸೇಲ್​ ದರ 80.97 ರೂಪಾಯಿ.

ಮುಂಬೈನಲ್ಲಿ ಪೆಟ್ರೋಲ್​ ದರ 97.00 ರೂಪಾಯಿ ಹಾಗೂ ಡೀಸೆಲ್​ ದರ 88.06 ರೂಪಾಯಿ.

ಕೊಲ್ಕತ್ತಾದಲ್ಲಿ ಪೆಟ್ರೋಲ್​ ದರ 91.78 ರೂಪಾಯಿ ಹಾಗೂ ಡೀಸೆಲ್​ ದರ 84.56 ರೂಪಾಯಿ.

ಬೆಂಗಳೂರಿನಲ್ಲಿ ಪೆಟ್ರೋಲ್​ ದರ 93.61 ರೂಪಾಯಿ ಹಾಗೂ ಡೀಸೆಲ್​ ದರ 85.84 ರೂಪಾಯಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...