ಲಾಕ್ಡೌನ್ ಬಳಿಕ ಒಟಿಟಿ ಫ್ಲಾಟ್ಫಾರಂ ಹಾಗೂ ಆನ್ಲೈನ್ ಇಂಟರ್ನೆಟ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಇದೆಲ್ಲದರ ಜೊತೆಗೆ ಅಶ್ಲೀಲ ಸಿನಿಮಾಗಳಿಗೂ ಬೇಡಿಕೆ ಹೆಚ್ಚಾಗ್ತಿದೆ. ಇದೇ ಕಾರಣಕ್ಕೆ ಆನ್ಲೈನ್ ವಿವಿಧ ವೇದಿಕೆಗಳಲ್ಲಿ ನೀಲಿ ಚಿತ್ರಗಳು ಸದ್ದು ಮಾಡುತ್ತಿವೆ. ಮುಂಬೈನ ಕ್ರೈಂ ಬ್ರ್ಯಾಂಚ್ ಪೊಲೀಸರು ಅಶ್ಲೀಲ ಸಿನಿಮಾಗಳನ್ನ ನಿರ್ಮಾಣ ಮಾಡುತ್ತಿದ್ದ ಗುಂಪನ್ನ ಬಂಧಿಸಿದ್ದಾರೆ. ಈ ಗುಂಪಿನ ಕಾರ್ಯ ಹಾಗೂ ಅವರು ಗಳಿಸುತ್ತಿದ್ದ ಹಣದ ಮೊತ್ತವನ್ನ ಕೇಳಿ ಪೊಲೀಸರು ಕೂಡ ಶಾಕ್ ಆಗಿದ್ದಾರೆ.
ಈ ಗುಂಪು ಚಂದಾದಾರಿಕೆ ಆಧಾರದ ಮೇಲೆ ಜನತೆಗೆ ನೀಲಿ ಚಿತ್ರಗಳನ್ನ ಹಂಚಿಕೆ ಮಾಡುವ ಕೆಲಸವನ್ನ ಮಾಡುತ್ತಿತ್ತು. ಒಂದು ವಾರಕ್ಕೆ ಒಂದು ನೀಲಿ ಚಿತ್ರದ ಎಪಿಸೋಡ್ನ್ನ ರಿಲೀಸ್ ಮಾಡಲಾಗುತ್ತಿತ್ತು. ಒಟಿಟಿ ವೇದಿಕೆಯ ಮಾದರಿಯಲ್ಲೇ ಚಂದಾದಾರರಿಗೆ ವಾರಕ್ಕೊಂದು ಎಪಿಸೋಡ್ಗಳನ್ನ ಪ್ರದರ್ಶಿಸಲಾಗುತ್ತಿತ್ತು. ಚಂದಾದಾರರು ಅಪ್ಲಿಕೇಶನ್ ಒಂದನ್ನ ಡೌನ್ಲೋಡ್ ಮಾಡಿಕೊಂಡು ಈ ನೀಲಿ ಚಿತ್ರಗಳನ್ನ ವೀಕ್ಷಣೆ ಮಾಡುತ್ತಿದ್ದರು. ಈ ಪ್ರಕರಣ ಸಂಬಂಧ ಪೊಲೀಸರು ಏಳು ಮಂದಿಯನ್ನ ಬಂಧಿಸಿದ್ದಾರೆ ಇದರಲ್ಲಿ ನಟರೊಬ್ಬರು ಶಾಮೀಲಾಗಿದ್ದಾರೆ ಎನ್ನಲಾಗಿದೆ.
ಸೂಕ್ತ ಮಾಹಿತಿ ಆಧರಿಸಿ ಆರೋಪಿಗಳನ್ನ ಬಂಧಿಸಿದ ಪೊಲೀಸರು ನೀಲಿ ಚಿತ್ರದ ಕತೆ, ಮೊಬೈಲ್ ಕ್ಯಾಮರಾ, ಲೈಟ್ಸ್ ಹಾಗೂ ಇನ್ನೂ ವಿವಿಧ ವಸ್ತುಗಳು ಸಿಕ್ಕಿದೆ. ಪ್ರಾಥಮಿಕ ತನಿಖೆ ವೇಳೆ ಈ ಅಶ್ಲೀಲ ಅಪ್ಲಿಕೇಶನ್ಗೆ ಲಕ್ಷಕ್ಕೂ ಅಧಿಕ ಮಂದಿ ಚಂದಾದಾರರು ಇದ್ದರು ಎನ್ನಲಾಗಿದೆ. ಆದರೆ ಆಶ್ಚರ್ಯಕರ ವಿಚಾರ ಅಂದ್ರೆ ಮಹಿಳೆಯ ಮೊಬೈಲ್ನಲ್ಲಿ ಶೂಟಿಂಗ್ ನಡೆಸಲಾಗುತ್ತಿತ್ತು. ಪೊಲೀಸರು ದಾಳಿ ನಡೆಸಲು ಸ್ಥಳಕ್ಕೆ ತೆರಳಿದ್ದ ವೇಳೆಯೂ ಶೂಟಿಂಗ್ ನಡೆಯುತ್ತಲೇ ಇತ್ತು.
ಈ ತಂಡದಿಂದ ಮಹಿಳೆಯೊಬ್ಬಳನ್ನ ಪೊಲೀಸರು ಮುಕ್ತಿಗೊಳಿಸಿದ್ದಾರೆ. ವೆಬ್ಸಿರೀಸ್ನಲ್ಲಿ ಭಾಗಿ ಮಾಡಿಕೊಳ್ಳುವ ಆಮೀಷವನ್ನೊಡ್ಡಿ ಆಕೆಯನ್ನ ಶೂಟಿಂಗ್ ಸ್ಥಳಕ್ಕೆ ಕರೆಯಿಸಿಕೊಳ್ಳಲಾಗಿತ್ತು. ಆದರೆ ಆಕೆಗೆ ಶೂಟಿಂಗ್ ಸ್ಥಳಕ್ಕೆ ಬಂದ ಬಳಿಕವೇ ಇದೊಂದು ನೀಲಿ ಚಿತ್ರದ ಗ್ಯಾಂಗ್ ಎಂಬ ವಿಚಾರ ಬೆಳಕಿಗೆ ಬಂದಿದೆ.
ಪೊಲೀಸರು ಇಂತಹ 12 ಅಪ್ಲಿಕೇಶನ್ಗಳ ಬಗ್ಗೆ ಮಾಹಿತಿ ದೊರಕಿದೆ ಎಂದು ಹೇಳಿದ್ದಾರೆ. ಇನ್ನು ಬಂಧನಕ್ಕೊಳಗಾದ ತಂಡದ ಅಪ್ಲಿಕೇಶನ್ಗೆ ಪ್ರತಿ ತಿಂಗಳು 199 ರೂಪಾಯಿ ಪಾವತಿ ಮಾಡಬೇಕಿತ್ತು. ಈ ಅಪ್ಲಿಕೇಶನ್ಗೆ ಲಕ್ಷಕ್ಕೂ ಹೆಚ್ಚು ಚಂದಾದಾರರಿದ್ದು 2 ಕೋಟಿ ರೂಪಾಯಿಗೂ ಅಧಿಕ ಹಣ ಸಂಪಾದಿಸಿದ್ದರು ಎನ್ನಲಾಗಿದೆ.