ಎಟಿಎಂ ಮಹತ್ವದ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಎಲ್ಲರೂ ಎಟಿಎಂ ಬಳಕೆ ಮಾಡ್ತಾರೆ. ಆದ್ರೆ ಈ ಎಟಿಎಂಗಳು ಹಣ ನೀಡುವ ಜೊತೆಗೆ ಉಚಿತವಾಗಿ ಖಾಯಿಲೆಗಳನ್ನು ನೀಡುತ್ತವೆ. ಹಾಗಾಗಿ ಎಟಿಎಂ ಬಳಸುವಾಗ ಬಹಳ ಎಚ್ಚರಿಕೆ ವಹಿಸುವುದು ಒಳ್ಳೆಯದು.
ಎಟಿಎಂ ಬಳಕೆಯಿಂದ ಗುಪ್ತಾಂಗದಲ್ಲಿ ಕಾಣಿಸುವ ವಿವಿಧ ರೋಗಕ್ಕೆ ಬಲಿಯಾಗುವ ಸಾಧ್ಯತೆ ಇದೆ. ಸಂಶೋಧನೆಯೊಂದು ಈ ಆತಂಕಕಾರಿ ವಿಷಯವನ್ನು ಹೊರಹಾಕಿದೆ. ಎಟಿಎಂ ಮಶಿನ್ ಮೇಲೆ ರೋಗಗಳನ್ನು ಹರಡುವ ಅನೇಕ ಸೂಕ್ಷ್ಮಜೀವಿಗಳಿರುತ್ತವೆ ಎಂದು ನ್ಯೂಯಾರ್ಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೆಯ್ನೆ ಕಾರ್ಲ್ಟನ್ ತಿಳಿಸಿದ್ದಾರೆ.
ಎಟಿಎಂನ ಕೀಲಿಮಣೆ ಮೇಲೆ ವಿವಿಧ ರೋಗಗಳನ್ನು ಹರಡುವ ಸೂಕ್ಷ್ಮಾಣು ಜೀವಿಗಳಿರುತ್ತವೆ. ಒಬ್ಬರು ಬಳಸಿದ ಯಂತ್ರವನ್ನೇ ಇನ್ನೊಬ್ಬರು ಮುಟ್ಟುವುದರಿಂದ ಈ ಸೂಕ್ಷ್ಮಾಣು ಜೀವಿಗಳು ಸುಲಭವಾಗಿ ಇನ್ನೊಬ್ಬನ ದೇಹ ತಲುಪುತ್ತವೆ ಎಂದು ಸಂಶೋಧನೆ ತಿಳಿಸಿದೆ. ಎಟಿಎಂಗಳನ್ನು ಅಧ್ಯಯನಕ್ಕೊಳಪಡಿಸಿದ ನಂತ್ರ ಸಂಶೋಧನಾ ತಂಡ ಈ ವಿಷಯವನ್ನು ಬಹಿರಂಗಪಡಿಸಿದೆ.