alex Certify ಮೆದುಳಿಗೆ ಕೆಲಸ ನೀಡುತ್ತೆ ಈಗ ತಲೆ ಎತ್ತಿರೋ ಹೊಸ ವಸ್ತು ಸಂಗ್ರಹಾಲಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆದುಳಿಗೆ ಕೆಲಸ ನೀಡುತ್ತೆ ಈಗ ತಲೆ ಎತ್ತಿರೋ ಹೊಸ ವಸ್ತು ಸಂಗ್ರಹಾಲಯ..!

ಇಲ್ಯೂಷನ್​ ಮ್ಯೂಸಿಯಂಗಳು ಕಣ್ಣಿಗೆ ಆನಂದ ನೀಡೋದ್ರ ಜೊತೆಗೆ ಮೆದುಳಿಗೆ ಕೆಲಸ ಕೊಡೋದು ಜಾಸ್ತಿ. ಇದೀಗ ಇಂತಹ ಇಲ್ಯೂಷನ್​ ವಸ್ತು ಸಂಗ್ರಹಾಲಯ ದೆಹಲಿಯ ಕನಾಟ್​ ಪ್ರದೇಶದಲ್ಲಿ ಫೆಬ್ರವರಿ 10ರಿಂದ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿದೆ.

ಬಾಲ್ಕನ್ಸ್​ನ ಕ್ರೋಷಿಯಾ ದೇಶದಲ್ಲಿ 2015ರಲ್ಲಿ ಮೊದಲ ಇಲ್ಯೂಷನ್​​ ವಸ್ತು ಸಂಗ್ರಹಾಲಯ ನಿರ್ಮಾಣವಾಯ್ತು. ಇದಾದ ಬಳಿಕ ಜಗತ್ತಿನ ಬಹುತೇಕ ಕಡೆ ಇಂತಹ ವಸ್ತು ಸಂಗ್ರಹಾಲಯವನ್ನ ನಿರ್ಮಿಸಲಾಗಿದೆ. ಇದರ 30ನೇ ಸ್ಥಳವಾಗಿ ನವದೆಹಲಿಯನ್ನ ಆಯ್ಕೆ ಮಾಡಿಕೊಳ್ಳಲಾಗಿದೆ.

ಕೆನಡಾದ ಸಂಶೋಧನೆಯಲ್ಲಿ ಬಯಲಾಯ್ತು ಕೋವಿಡ್​ 19 ಕುರಿತ ಮತ್ತೊಂದು ಭಯಾನಕ ಅಂಶ

ಗಣಿತ, ವಿಜ್ಞಾನ ಹಾಗೂ ಮನಃಶಾಸ್ತ್ರವನ್ನ ಆಧಾರವಾಗಿ ಇಟ್ಟುಕೊಂಡು ಈ ಮ್ಯೂಸಿಯಂನ್ನು ಸ್ಥಾಪಿಸಲಾಗಿದೆ. ಇಲ್ಲಿರುವ ಪ್ರತಿಯೊಂದು ಆಕೃತಿಗಳೂ ನಿಮ್ಮ ಮೆದುಳಿಗೆ ಕೆಲಸ ನೀಡಲಿವೆ. ಅಲ್ಲದೇ ಇಲ್ಲಿ ನಿಮಗೆ ಬಗೆ ಬಗೆಯ ಫೋಟೋಗಳನ್ನ ಕ್ಲಿಕ್ಕಿಸಿಕೊಳ್ಳೋಕೂ ಅವಕಾಶ ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...